ಉಡುಪಿ,ಮಾ 31(DaijiworldNews/AK): ಕಾಪು ಪೊಲೀಸ್ ಕ್ವಾರ್ಟರ್ಸ್ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಪೇದೆ ಜ್ಯೋತಿ ಅವರ ಪತಿ ರವಿಕುಮಾರ್ ಅವರನ್ನು ಬಂಧಿಸಲಾಗಿದೆ.
ಕಾಪು ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿ ಸೇವೆ ಸಲ್ಲಿಸಿದ ಜ್ಯೋತಿ ಮಾರ್ಚ್ 30 ರಂದು ಬೆಳಗ್ಗೆ ತನ್ನ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಪತಿ ರವಿಕುಮಾರ್ನ ಅನುಮಾನಾಸ್ಪದ ವರ್ತನೆಯೇ ಜ್ಯೋತಿ ಆತ್ಮಹತ್ಯಗೆ ಕಾರಣ ಎನ್ನಲಾಗುತ್ತಿದೆ. ಕಾಪು ಪೊಲೀಸ್ ಠಾಣೆಯಲ್ಲಿ ಜ್ಯೋತಿ ಅವರ ತಾಯಿ ಪ್ರಕರಣ ದಾಖಲಿಸಿದ್ದಾರೆ.