ಮಂಗಳೂರು,ಮಾ 29(DaijiworldNews/ AK): ಅಕ್ರಮವಾಗಿ ಜಾನುವಾರು ಕಡಿದು ಮಾಂಸ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಾದ ಅದ್ಯಾರ್ ಗ್ರಾಮದ ವಲಚ್ಚಿನ್ ಖಾದರ್ ಮಹಮ್ಮದ್(52), ಬಂಟ್ವಾಳ ತಾಲೂಕು ಪುದು ಗ್ರಾಮದ ಮಾರಿಪಳ್ಳದ ಇನಸ್ಮಾಯಿಲ್(27), ಅಡ್ಯಾರ್ ಪದವು ಮನಸೀದಿ ಬಳಿ ಅಡ್ಯರ್ ಗ್ರಾಮದ ಮಹಮ್ಮದ್ ಶಮೀರ್(18) ಎಂದು ಗುರುತಿಸಲಾಗಿದೆ.
ಮಂಗಳೂರು ಗ್ರಾಮಾಂತರ ರಾಣಾ ವ್ಯಾಪ್ತಿಯ ವಳಚ್ಚಿಲ್ ಖಾದರ್ ,ಮಹಮದ್ ಹೌಸ್ ಎಂಬವರ ಮನೆಯ ಶೆಡ್ನಲ್ಲಿ ಅಕ್ರಮವಾಗಿ ಜಾನುವಾರು ಕಡಿದು ಮಾಂಸ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿ ಪಡೆದು ದಾಳಿ ನಡೆಸಲಾಯಿತು. ಸುಮಾರು 180 ಕೆ.ಜಿ ದನದ ಮಾಂಸವನ್ನು ಸ್ವಾಧೀನ ಪಡಿಸಲಾಗಿದೆ.
ಆರೋಪಿಗಳನ್ನು ಬಂಧಿಸಿ ರಾಣಾ ಅ.ಕ್ರ 24/2024, ಕಲಂ 4,5,7,12 ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧ್ಯಾದೇಶ ೨೦೨೦ ರಂತೆ ಪ್ರಕರಣ ದಾಖಲಿಸಿಉಕೊಂಡು ನ್ಯಾಯಲಯಕ್ಕೆ ಹಾಜರುಪಡಿಸಲಾಗಿದೆ.
ಈ ಪ್ರಕರಣದ ಪತ್ತೆ ಕಾರ್ಯವನ್ನು ಪೊಲೀಸ್ ಆಯುಕ್ತರಾದ ಅನುಪಮ ಅಗರವಾಲ್ ಅವರ ನಿದೇರ್ಶನದಂತೆ , ಸಿದ್ದಾರ್ಥ ಐಪಿಎಸ್ ಪೊಲೀಸ್ ಉಪ ಆಯುಕ್ತರು, ದಿನೇಶ್ ಕುಮಾರ ಪೊಲೀಸ್ ಉಪ ಆಯುಕ್ತರು(ಅಪರಾಧ ಮತ್ತು ಸಂಚಾರ) ಮಾರ್ಗದರ್ಶದಂತೆ ಮಂಗಳೂರು ದಕ್ಷಿಣ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಧನ್ಯಾ ನಾಯಕ್ ಅರವರ ನೇತೃತ್ವದದಲ್ಲಿ ಗ್ರಾಮಾಂತ ಪೊಲೀಸ್ ರಾಣಾ ಪೊಲೀಸ್ ನಿರೀಕ್ಷಕರಾದ ಶಿವಕುಮಾರ್, ಅರುಣ್ಕುಮಾರ್ ಪಿಎಸ್ಐ-1, ರಾಮ ನಾಯ್ಕ ಪಿಎಸ್ಐ-3 ರಾಣಾ ಸಿಬ್ಬಂದಿಗಳು ಸಹಕಾರಿಸಿದ್ದಾರೆ.