ಕಾರ್ಕಳ ನ 18: ನವೆಂಬರ್ 24,25,26ರಂದು ಉಡುಪಿಯಲ್ಲಿ ಜರಗಲಿರುವ ಧರ್ಮ ಸಂಸದ್ ಸಮಾವೇಶದಲ್ಲಿ ಕೈಗೊಳ್ಳಲಾಗುವ ಮಹತ್ವದ ನಿರ್ಣಯಗಳು ಭಾರತದಲ್ಲಿ ಹೊಸ ಶಕೆ ನಾಂದಿಯಾಗಲಿದೆ ಎಂದು ವಿಶ್ವ ಹಿಂದು ಪರಿಷತ್ ಮುಖಂಡ ಇರ್ವತ್ತೂರು ಭಾಸ್ಕರ್ ಕೋಟ್ಯಾನ್ ಹೇಳಿದರು.
ನಗರದ ಹೋಟೆಲ್ವೊಂದರಲ್ಲಿ ಶನಿವಾರ ಸಂಘ ಪರಿವಾರದ ಮುಖಂಡರು ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸನಾತನ ಹಿಂದು ಧರ್ಮಕ್ಕೆ ಅನಾಧಿಕಾಲದ ಇತಿಹಾಸವಿದೆ. ಋಷಿ-ಮುನಿಗಳು,ಸಾಧು-ಸಂತರ ದೈವಿಕ ಶಕ್ತಿಯಲ್ಲಿ ಮುನ್ನೆಡುವ ಕೊಂಡು ಬಂದಿರುವ ಈ ಧರ್ಮದ ಉನ್ನತಿಗಾಗಿ ಉಡುಪಿಯಲ್ಲಿ ಧರ್ಮ ಸಂಸದ್ ನಡೆಯಲಿದೆ.
ಧರ್ಮ ಸಂಸದ್ನ ಕಾರ್ಕಳ ತಾಲೂಕು ಅಧ್ಯಕ್ಷ ಮಹೇಶ್ ಕುಡುಪುಲಾಜೆ ನೇತೃತ್ವದಲ್ಲಿ ತಾಲೂಕು ಪ್ರತಿಗ್ರಾಮಗಳಲ್ಲಿ ಸಭೆಗಳನ್ನು ಆಯೋಜಿಸಲಾಗಿದೆ. ಪ್ರತಿಯೊಂದು ಗ್ರಾಮಗಳಿಂದ ಕನಿಷ್ಠ 500 ಮಂದಿಯಂತೆ ಅದರಲ್ಲೂ ಅರ್ಧ ಭಾಗ ಮಹಿಳೆಯರೇ ಪಾಲ್ಗೊಳ್ಳಲಿದ್ದು ಸುಮಾರು 25 ಸಾವಿರ ಮಂದಿ ನಡೆಯಲಿರುವ ಧರ್ಮ ಸಂಸದ್ನಲ್ಲಿ ಭಾಗವಹಿಸಲಿದ್ದಾರೆ.
ದೇಶಕ್ಕೆ ಎದುರಾಗಿರುವ ಕಂಟಕಗಳಲ್ಲಿ ಪ್ರಮುಖವಾಗಿರುವ ಮತಾಂತರ, ಗೋಹತ್ಯೆ, ಲವ್ಜಿಹಾದ್ ಮೊದಲಾದವುಗಳಿಗೆ ಕಡಿವಾಣ ಹಾಕುವ ನಿಟ್ಟಿ ದೇಶ ಕಾನೂನು ಜಾರಿಗೆ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗುವುದೆಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಬಜರಂಗ ದಳದ ಮುಖಂಡರಾದ ಮಹೇಶ್ ಬೈಲೂರು, ಗುರುಪ್ರಸಾದ್, ವಿಖ್ಯಾತ ಶೆಟ್ಟಿ, ಸುವ್ರತ ಕುಮಾರ್, ವಿಶ್ವ ಹಿಂದು ಪರಿಷತ್ನ ರವೀಂದ್ರ ಮೊಯಿಲಿ, ವಿಜಯ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.