ಮಂಗಳೂರು, ಮಾ 27(DaijiworldNews/MS): ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಮಾ. 25 ಬೆಳಗ್ಗೆ 9 ರಿಂದ ಮಾ. 26 ರವರೆಗೆ ನಡೆದ ತಪಾಸಣೆಯಲ್ಲಿ ಅಕ್ರಮ ಹಣ ಹಾಗೂ ಮದ್ಯ ವಶಪಡಿಸಿಕೊಳ್ಳಲಾಗಿದೆ. ಒಟ್ಟು 1,39,300 ರೂ. ಹಣ ಹಾಗೂ 46 ಲೀ. ಮದ್ಯ ವಶಕ್ಕೆ ಪಡೆಯಲಾಗಿದೆ.
ಇದರೊಂದಿಗೆ ಮಾ. 17 ರಿಂದ 26 ರ ವರೆಗೆ ಒಟ್ಟು 8,71,500 ರೂ. ನಗದನ್ನು ವಶಪಡಿಸಿಕೊಂಡಿದಾಗಿದೆ. ಇದರ ಜೊತೆಗೆ 5,72,342 ರೂ, ಮೌಲ್ಯದ ಒಟ್ಟು 1078,98 ಲೀ. ಮದ್ಯವನ್ನು ಪೊಲೀಸರು ವಶಪಡಿಸಿಕೊಳ್ಳಲಾಗಿದೆ.
ಈ ಪೈಕಿ ತಪಾಸಣೆ ನಡೆದ ನಂತರ ಇದರ ಬಗ್ಗೆ ಸಂಪೂರ್ಣವಾಗಿ ದಾಖಲೆಯನ್ನು ಪರಿಶೀಲಿಸಿ 1.32 ಲಕ್ಷ ರೂ. ಗಳನ್ನು ಸಂಬಂಧಪಟ್ಟ ವ್ಯಕ್ತಿಗಳಿಗೆ ವಾಪಾಸ್ ನೀಡಲಾಗಿದೆ.