ಮಲ್ಪೆ, ಮಾ 27(DaijiworldNews/MS): ಮಲ್ಪೆ ಬೀಚ್ನಲ್ಲಿ ಅಲೆಗಳ ಹೊಡೆತಕ್ಕೆ ಸಮುದ್ರದಲ್ಲಿ ಮುಳುಗಿ ಅಸ್ವಸ್ಥಗೊಂಡ ಒಂದೂವರೆ ವರ್ಷ ಪ್ರಾಯದ ಮಗುವನ್ನು ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ರಕ್ಷಿಸಿರುವ ಘಟನೆ ಇಂದು ಸಂಜೆ ವೇಳೆ ನಡೆದಿದೆ.
ಮಂಗಳವಾರ ಮದ್ಯಾಹ್ನ ಬೀಚ್ಗೆ ಪ್ರವಾಸಕ್ಕೆ ಬಂದಿದ್ದ ಮೈಸೂರು ಮೂಲದ ದಂಪತಿ ತಮ್ಮ ಮಗು ಪೂರ್ವಿಯೊಂದಿಗೆ ಸಮುದ್ರದಲ್ಲಿ ಸ್ನಾನಕ್ಕಿಳಿದಿದ್ದರು. ಈ ವೇಳೆ ಮಗು ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ, ನೀರು ಕುಡಿದು, ಪ್ರಜ್ಞಾಹೀನವಾಗಿತ್ತು.
ಇದನ್ನು ಕಂಡ ಮಲ್ಪೆಬೀಚ್ ಅಟೋರಿಕ್ಷಾ ನಿಲ್ದಾಣದ ಅಟೋ ಚಾಲಕರು ಆ ಮಗುವನ್ನು ತನ್ನ ಅಟೋರಿಕ್ಷಾ ಮೂಲಕ ಈಶ್ವರ್ ಮಲ್ಪೆ ಅವರ ಆಂಬುಲೆನ್ಸ್ ಬಳಿ ತಲುಪಿಸಿದರು.ತಕ್ಷಣ ಕಾರ್ಯ ಪ್ರವ್ರತ್ತರಾದ ಈಶ್ವರ್ ಮಲ್ಪೆ ಮತ್ತು ತಂಡ ಆ ಮಗುವಿಗೆ ಪ್ರಥಮ ಚಿಕಿತ್ಸೆ ನೀಡಿ, ಆಂಬುಲೆನ್ಸ್ ಮೂಲಕ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿತು. ಸದ್ಯ ಮಗು ಚೇತರಿಕೆಯನ್ನು ಕಾಣುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದೆ ಎಂದು ತಿಳಿದು ಬಂದಿದೆ.