ಮಂಗಳೂರು, ಮಾ 26(DaijiworldNews/ AK): ಲೋಕಸಭಾ ಚುನಾವಣೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ ಕ್ರಿಮಿನಲ್ ಚಟುವಟಿಕೆಗಳಲ್ಲಿ ನಿರತರಾಗಿರುವ 13 ಮಂದಿ ಆರೋಪಿಗಳಿಗೆ ಪೊಲೀಸ್ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಗಡಿಪಾರು ಆದೇಶ ಹೊರಡಿಸಿದ್ದಾರೆ.
ಪಾದೇಕಲ್ಲು, ಬೋಳಾರ ಜ್ಞಾನೇಶ್ ನಾಯಕ್(25), ಕುದ್ರೋಳಿ, ಅಬ್ದುಲ್ ಫಹಾದ್(25), ಉಳ್ಳಾಲದ ಮೊಗವೀರ ಪಟ್ಟಣದ ಧನುಷ್(30), ಶಾಂತಿನಗರ, ಕಾವೂರು, ಮೊಹಮದ್ ಸುಹೇಬ್ (28),ವಾಮಂಜೂರಿನ ದೀಪಕ್ ಪೂಜಾರಿ (38), ಸುರತ್ಕಲ್ ಕಾಟಿಪಳ್ಳದ ಶಾಹಿಲ್ ಇಸ್ಮಾಯಿಲ್ (27), ಉಳ್ಳಾಲದ ಮೊಹಮದ್ ಶಾಕಿರ್ (30), ಉಳ್ಳಾಲಮೇಲಂಗಡಿ ಇಬ್ರಾಹಿಂ ಖಲೀಲ್ (22), ಕುದ್ರೋಳಿ ಕರ್ನಲ್ ಗಾರ್ಡನ್, ಧನುಷ್ (28), ಮಂಗಳೂರು ಫೈಝಲ್ ನಗರ ಟೊಪ್ಪಿ ನೌಫಲ್ (35) , ಮಂಗಳೂರು ಹವಿತ್ ಪೂಜಾರಿ (28), ಪರಂಗಿಪೇಟೆ ಕೌಶಿಕ್ ನಿಹಾಲ್ (24),ಮೂಡಬಿದಿರೆ ಬೆಳುವಾಯಿ, ಸಂತೋಷ್ ಶೆಟ್ಟಿ (34) ಗಡಿಪಾರು ಆದೇಶಕ್ಕೆ ಒಳಗಾದ ಆರೋಪಿಗಳಾಗಿದ್ದಾರೆ.
ಆರೋಪಿಗಳ ವಿರುದ್ಧ ವಿವಿಧ ಠಾಣೆಗಳಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಶಾಂತಿಯುತ ಚುನಾವಣೆ ನಡೆಸುವ ಸಲುವಾಗಿ ಕ್ರಮ ಜರಗಿಸಲಾಗಿದೆ. ಈವರೆಗೆ ಒಟ್ಟು 48 ಮಂದಿಯ ವಿರುದ್ಧ ಗಡಿಪಾರು ಆದೇಶ ಮಾಡಲಾಗಿದೆ.ಅದಲ್ಲದೆ 480 ಮಂದಿಯ ವಿರುದ್ಧ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ.