ಕುಂದಾಪುರ, ಮಾ 26(DaijiworldNews/ AK): ಯಾವುದೇ ನಿಗಮದ ಅಧ್ಯಕ್ಷ ಹುದ್ದೆ ಸಿಗದಿದ್ದ ಕಾರಣ ಅಸಮಧಾನಗೊಂಡಿದ್ದ ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ ಕುಂದರ್ ರವರಿಗೆ ಚುನಾವಣೆ ಬಳಿಕ ಹುದ್ದೆ ಕೊಡಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದೊಳಗಿನ ಭಿನ್ನಮತ ಶಮನಗೊಂಡಂತಾಗಿದೆ.
ನಿಗಮ ಸ್ಥಾನ ಸಿಗದ ಹಿನ್ನೆಯಲ್ಲಿ ಶಂಕರ್ ಕುಂದರ್ ತಮ್ಮ ಕ್ಷೇತ್ರದ ಕಾರ್ಯಕರ್ತರ ಸಭೆ ಕರೆದು ಸಾಮೂಹಿಕ ರಾಜೀನಾಮೆ ಕೊಡುವುದಾಗಿ ಎಚ್ಚರಿಸಿದ್ದರು. ಇದನ್ನು ಮನಗಂಡು ರಾಜ್ಯ ಕಾಂಗ್ರೆಸ್ ನಾಯಕರ ಸೂಚನೆಯಂತೆ ಜಿಲ್ಲಾಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರ್ ರವರ ಮಾರ್ಗದರ್ಶನದಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ರವರ ನೇತೃತ್ವದಲ್ಲಿ ಬ್ರಹ್ಮಾವರದ ಸಿಟಿ ಸೆಂಟರ್ ನಲ್ಲಿ ಶಂಕರ್ ಎ ಕುಂದರ್ ಮತ್ತು ಬೆಂಬಲಿಗರನ್ನು ಭೇಟಿಯಾಗಿ ತಮಗೆ ಚುನಾವಣೆ ಮುಗಿದ ನಂತರ ರಾಜ್ಯ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ನಾನೆ ಮುಖತಹ ಭೇಟಿ ಮಾಡಿಸಿ ಅವಕಾಶ ನೀಡುವ ಭರವಸೆ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಶಂಕರ್ ಎ ಕುಂದರ್, ಜಯಪ್ರಕಾಶ್ ಹೆಗ್ಡೆ ನೀಡಿದ ಭರವಸೆಯ ಮೇರೆಗೆ ಪಕ್ಷದಲ್ಲಿ ಪ್ರಾಮಾಣಿಕವಾಗಿ ಕಾರ್ಯಕರ್ತರೊಂದಿಗೆ ದುಡಿದು ಪಕ್ಷದ ಅಭ್ಯರ್ಥಿಯನ್ನ ಗೆಲ್ಲಿಸಲು ಶ್ರಮವಹಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ನರಸಿಂಹಮೂರ್ತಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಧ್ಯಕ್ಷ ಕಿಶನ್ ಹೆಗ್ಡೆ, ಶಂಕರ ಬಂಗೇರ ಕೋಡಿ ಕನ್ಯಾನ, ಬಸವ ಪೂಜಾರಿ ಗುಂಡ್ಮಿ, ಎಂ. ಎಸ್. ಸಂಜೀವ, ಶ್ರೀನಿವಾಸ್ ಅಮೀನ್, ರವೀಂದ್ರ ಕಾಮತ್ ಗುಂಡ್ಮಿ, ದಿನೇಶ್ ಬಂಗೇರ ಗುಂಡ್ಮಿ, ಬಾರ್ಕುರ್ ರಮಾನಂದ ಶೆಟ್ಟಿ, ಗಣೇಶ್ ಕೆ ನೆಲ್ಲಿಬೆಟ್ಟು, ಶ್ರೀನಿವಾಸ್ ವಡ್ಡರ್ಸೆ, ಸುರೇಶ್ ಕಚ್ಕೆರೆ, ರಮೇಶ್ ಎಸ್ ತಿಂಗಳಾಯ, ನವೀನ್ ಕೆ ಕುಂದರ್, ಜಯ ಏನ್ ಸುವರ್ಣ, ವಾಮನ್ ಕೆ ಕುಂದರ್, ದಯಾನಂದ ಎಂ ಕೋಟ್ಯಾನ್, ರಮೇಶ್ ಎಂ ಕೋಟ್ಯಾನ್, ಜಯ ಕೆ ಕುಂದರ್, ಹರೀಶ್ ಕುಂದರ್, ಶ್ರೀನಿವಾಸ್ ಶೆಟ್ಟಿಗಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.