ಬ್ರಹ್ಮಾವರ, ಮಾ 26(DaijiworldNews/ AK): ನದಿಗೆ ಮೀನು ಹಿಡಿಯಲು ತೆರಳಿದ್ದ ವೇಳೆಯಲ್ಲಿ ಕಾಲು ಜಾರಿ ನದಿಯಲ್ಲಿ ಮುಳುಗಿ ಯುವಕರಿಬ್ಬರು ಸಾವವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾರಕೂರಿನ ಹೊಸಾಳ ಎಂಬಲ್ಲಿ ನಡೆದಿದೆ.
ಇಬ್ಬರು ಯುವಕರ ಮೃತದೇಹವನ್ನು ಮುಳುಗು ತಜ್ಞ ಈಶ್ವರ್ ಮಲ್ಪೆ ಹೊರ ತೆಗೆದಿದ್ದಾರೆ.ಬ್ರಹ್ಮಾವರ ತಾಲೂಕಿನ ಬಾರಕೂರಿನ ಹೊಸಾಳದ ನಿವಾಸಿಗಳಾಗಿರುವ ಶ್ರೀಶ (19) ಹಾಗೂ ಪ್ರಶಾಂತ್(35) ಎಂಬವರೇ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಮೃತ ದುರ್ದೈವಿಗಳು.
ಶ್ರೀಶ ಹಾಗೂ ಪ್ರಶಾಂತ್ ಕೆಲಸದ ಬಿಡುವಿನ ವೇಳೆಯಲ್ಲಿ ನದಿಯಲ್ಲಿ ಬಲೆ ಬಿಟ್ಟು ಮೀನನ್ನು ಹಿಡಿಯುತ್ತಿದ್ದರು. ಮುಂಜಾನೆ ತಿಂಡಿ ತಿಂದು ಇಬ್ಬರು ನದಿಗೆ ಬಂದಿದ್ದಾರೆ. ಬಲೆ ಬಿಟ್ಟು ಮೀನು ಹಿಡಿಯುವಾಗ ಬಲೆಗೆ ಸಿಲುಕಿ ಮೃತಪಟ್ಟಿದ್ದಾರೆ
ಮುಳುಗುತಜ್ಞ ಈಶ್ವರ ಮಲ್ಪೆ ಹಾಗೂ ಇತರ ಈಜುಗಾರರ ತಂಡ ಸ್ಥಳಕ್ಕೆ ಬಂದು ಶವಗಳ ಶೋಧ ಕಾರ್ಯವನ್ನು ಆರಂಭಿಸಿತ್ತು. ಅಂತಿಮವಾಗಿ ಇಬ್ಬರ ಮೃತದೇಹಗಳನ್ನು ಹೊರಗೆ ತೆಗೆಯಲಾಗಿದೆ. ಈ ಕುರಿತು ಬ್ರಹ್ಮಾವರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.