ಮಂಗಳೂರು, ಮಾ 26(DaijiworldNews/MS): ಮಾರುಕಟ್ಟೆಯಲ್ಲಿ ಹಸಿ ಕೋಕ್ಕೋ ಧಾರಣೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಇದು ಬೆಳೆಗಾರರಲ್ಲಿ ಉಲ್ಲಾಸ ಮೂಡಿಸಿದೆ. ಪ್ರಸ್ತುತ ಪ್ರತಿ ಕೆ.ಜಿ.ಗೂ 200 ರೂ ದಾಟಿದೆ. ಇದು ಸಾರ್ವಕಾಲಿಕ ದಾಖಲೆ ದರವಾಗಿದೆ. ಈ ಹಿಂದೆ ಪ್ರತಿ ಕೆ.ಜಿ ಗೆ 125ರೂ.ಗಳಿಗಿಂತ ಹೆಚ್ಚಾಗಿರಲಿಲ್ಲ.
ಜಾಗತಿಕ ಮಟ್ಟದಲ್ಲಿ ಕೋಕಾಬೀಜ ಬೇಡಿಕೆಯಷ್ಟು ಪೂರೈಕೆಯಾಗದ ಹಿನ್ನೆಲೆಯಲ್ಲಿ ಮಾರುಕಟ್ಟೆ ಧಾರಣೆ ಗರಿಷ್ಠ ಮಟ್ಟಕ್ಕೆ ತಲುಪಿದೆ ಎಂದು ಲೆಕ್ಕಾಚಾರ ಹಾಕಲಾಗಿದೆ. ಇದರೊಂದಿಗೆ ಕೋಕ್ಕೋ ಆಧಾರಿತ ಆಹಾರ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿರುವ ಕಾರಣದಿಂದ ಕ್ಯಾಂಪ್ಕೋ ಸಹಿತ ವಿವಿಧ ಕಂಪನಿಗಳು ಇದರತ್ತ ಹೆಚ್ಚಿನ ಗಮನ ಹರಿಸಿವೆ.
ಇನ್ನೊಂದೆಡೆ ಹೊಸ ಅಡಿಕೆಯ ಧಾರಣೆಯಲ್ಲೂ ಹೆಚ್ಚಳವಾಗಿದ್ದು, ಕೆ.ಜಿಗೆ 5 ರೂ.ಏರಿದೆ. ಒಣ ಕೋಕ್ಕೋಗೆ ಎರಡು ದಿನದ ಹಿಂದೆ ಇದ್ದ ಧಾರಣೆ ಗಮನಿಸಿದರೆ ಕೆ.ಜಿ ಯೊಂದಕ್ಕೆ 75 ರೂ.ಗಳಷ್ಟು ಏರಿಕೆ ಕಂಡಿವೆ ಅಲ್ಲದೇ ಇನ್ನಷ್ಟು ಹೆಚ್ಚಳವಾಗುವ ಮುನ್ಸೂಚನೆ ಇದೆ. ಇನ್ನೊಂದೆ ಹೊಸ ಅಡಿಕೆಯ ಧಾರಣೆಯಲ್ಲೂ ಹೆಚ್ಚಳವಾಗಿದ್ದು, ಕೆ.ಜಿಗೆ 5 ರೂ.ಏರಿದೆ.