ಕಾಸರಗೋಡು, ಮಾ 25(DaijiworldNews/AK): ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಕಾಸರಗೋಡು ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕಳ್ನಾಡ್ ಕಿಯೂರಿನ ಮುಹಮ್ಮದ್ ಶಮ್ನಾಸ್ ( 31) ಬಂಧಿತ ಆರೋಪಿ . ಈತನನ್ನು ವಯನಾಡಿನಿಂದ ಗಾಂಜಾ ಸಹಿತ ಪೊಲೀಸರು ಬಂಧಿಸಿದ್ದಾರೆ. ಮಾರ್ಚ್ ೨೦ ರಂದು ಕೂಡ್ಲು ಪಾಯಿಚ್ಚಾಲ್ ನ ಸಾವಿತ್ರಿ ಎಂಬವರು ಆಜಾದ್ ನಗರದ ರಸ್ತೆ ಮೂಲಕ ನಡೆದುಕೊಂಡು ಹೋಗುತ್ತಿದ್ದಾಗ ಹೆಲ್ಮೆಟ್ ಧರಿಸಿ ಬೈಕ್ ನಲ್ಲಿ ಬಂದು ಎರಡು ಪವನ್ ನ ಚಿನ್ನದ ಸಾರವನ್ನು ಎಗರಿಸಿ ಪರಾರಿಯಾಗಿದ್ದನು.
ಈ ಬಗ್ಗೆ ಪ್ರಕರಣ ದಾಖಲಿಸಲಾಗಿತ್ತು . ಈ ನಡುವೆ ನಡೆಯುತ್ತಿದ್ದಂತೆ ವಯನಾಡಿನಲ್ಲಿ ಗಾಂಜಾ ಸಹಿತ ಈತನನ್ನು ಬಂಧಿಸಿದ್ದು , ಪೊಲೀಸರು ವಿಚಾರಣೆ ನಡೆಸಿದಾಗ ಚಿನ್ನಾಭರಣ ಕಳವು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಈತ ಹತ್ತಕ್ಕೂ ಅಧಿಕ ಚಿನ್ನದ ಸರ ಎಗರಿಸಿದ ಪ್ರಕರಣಗಳಲ್ಲಿ ಶಾಮೀಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ