ಉಡುಪಿ, ಮೇ01(Daijiworld News/SS): ಮೂಳೂರು ಸಾಯಿರಾಧಾ ಹೆರಿಟೇಜ್ನಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿಗೆ ಪ್ರಕೃತಿ ಚಿಕಿತ್ಸೆ, ಆಯುರ್ವೇದ ಪದ್ಧತಿಯ ಚಿಕಿತ್ಸೆ, ಮಸಾಜ್ ಸಹಿತ ಪಂಚಕರ್ಮ ಚಿಕಿತ್ಸೆ, ಆಯುರ್ವೇದಿಕ್ ಪಂಚಕರ್ಮ ರಸಾಯನ್ ಥೆರಪಿಯನ್ನು ನೀಡಲಾಗುತ್ತಿದೆ.
ಸಾಯಿರಾಧಾ ಹೆರಿಟೇಜ್ನಲ್ಲಿ ಡಾ| ತನ್ಮಯ್ ಗೋಸ್ವಾಮಿ ನೇತೃತ್ವದ 40 ಜನರ ವೈದ್ಯಕೀಯ ತಂಡ, ಆಯುರ್ವೇದಿಕ್ ಪಂಚಕರ್ಮ ರಸಾಯನ್ ಥೆರಪಿಯನ್ನು ನಡೆಸುತ್ತಿದೆ. 40 ಜನರ ತಂಡದಲ್ಲಿ 4 ಮಂದಿ ತಜ್ಞ ವೈದ್ಯರು, 20 ಮಂದಿ ಟೆಕ್ನೀಷಿಯನ್ಸ್ ಮತ್ತು 16 ಮಂದಿ ಸಿಬ್ಬಂದಿಗಳಿದ್ದಾರೆ ಎಂದು ತಿಳಿದುಬಂದಿದೆ.
ರೆಸಾರ್ಟ್ಗೆ ಸಾರ್ವಜನಿಕರ ಭೇಟಿಗೆ ನಿರ್ಬಂಧ ವಿಧಿಸಲಾಗಿದ್ದು, ಆರೋಗ್ಯ ಗಟ್ಟಿಗೊಳಿಸಲು ಆಯುರ್ವೇದ ಔಷಧ, ಬಾಡಿ ಮಸಾಜ್ ಸಹಿತ ವಿವಿಧ ಮಾದರಿಯ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. ಸಿಎಂ ಮೇ 3ರ ವರೆಗೆ ಚಿಕಿತ್ಸೆ ಪಡೆದರೆ, ದೇವೇಗೌಡರು ಒಂದು ವಾರ ರೆಸಾರ್ಟ್ನಲ್ಲಿ ತಂಗಲಿದ್ದಾರೆ ಎನ್ನಲಾಗಿದೆ.
ಸಚಿವ ಸಾ.ರಾ.ಮಹೇಶ್ ಮತ್ತು ವಿಧಾನಪರಿಷತ್ ಸದಸ್ಯ ಎಸ್. ಎಲ್.ಭೋಜೆಗೌಡ ಕೂಡ ಸಿ.ಎಂ.ಜತೆಗೆ ಆಗಮಿಸಿದ್ದು, ರೆಸಾರ್ಟ್ನಲ್ಲೇ ಉಳಿದುಕೊಂಡಿದ್ದಾರೆ. ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್ ಮೂಳೂರಿನಿಂದ ಕಾಪು ದೀಪಸ್ತಂಭದವರೆಗೆ ವಾಕಿಂಗ್ ಮಾಡಿದ್ಧಾರೆ.
ಭೋಜೇಗೌಡ ವೈದ್ಯರ ಸಲಹೆ ಪಡೆದು ಸಮುದ್ರ ದಡದಲ್ಲಿ ಸ್ಯಾಂಡ್ ಥೆರಪಿ ನಡೆಸಿದ್ದಾರೆ. ಬಳಿಕ, ಮೂಳೂರು ಬೀಚ್ನಲ್ಲಿ ಸಮುದ್ರ ಸ್ನಾನವನ್ನೂ ಮಾಡಿರುವುದಾಗಿ ತಿಳಿದು ಬಂದಿದೆ.