ಕಡಬ, ಮಾ 24(DaijiworldNews/AA): ಅರಣ್ಯದಂಚಿನ ಮನೆಯೊಂದಕ್ಕೆ ಶಂಕಿತ ನಕ್ಸಲರ ತಂಡ ಭೇಟಿ ನೀಡಿ, ಮೊಬೈಲ್ ಚಾರ್ಜ್ ಮಾಡಿ ತೆರಳಿರುವ ಘಟನೆ ಕಡಬ ಸುಬ್ರಹ್ಮಣ್ಯ ಗ್ರಾಮದ ಐನೆಕಿದು ಗ್ರಾಮದಲ್ಲಿ ನಡೆದಿದೆ.
ಶನಿವಾರ ಸಂಜೆ ಮಳೆಯಾಗುತ್ತಿದ್ದ ಸಂದರ್ಭದಲ್ಲಿ ಐನೆಕಿದು ಗ್ರಾಮದ ಕೋಟೆ ತೋಟದ ಮಜಲು ಎಂಬಲ್ಲಿನ ಅಶೋಕ್ ಎಂಬವರ ಮನೆಗೆ ಮೂವರು ಮಂದಿ ಶಂಕಿತ ನಕ್ಸಲರ ತಂಡ ಭೇಟಿ ನೀಡಿ, ಸುಮಾರು ಒಂದು ಗಂಟೆಗೂ ಅಧಿಕ ಕಾಲ ಮಾತುಕತೆ ನಡೆಸಿ ತೆರಳಿದ್ದಾರೆ.
ಕಳೆದ ವಾರ ನಕ್ಸಲರು ಕಾಣಿಸಿಕೊಂಡ ಕೂಜಿಮಲೆ ಮತ್ತು ಐನೆಕಿದು ನಡುವೆ ಸುಮಾರು 25 ಕಿ.ಮೀ. ಅಂತರವಿದೆ. ಇದೇ ಭಾಗದಲ್ಲಿ ನಕ್ಸಲ್ ನಿಗ್ರಹ ದಳ ಕೂಂಬಿಂಗ್ ನಡೆಸುತ್ತಿದ್ದರೂ ಶಂಕಿತರು ಕಾಣಿಸಿರಲಿಲ್ಲ. ಇನ್ನು ಅಧಿಕಾರಿಗಳ ಸೂಕ್ತ ಮಾಹಿತಿಯ ಬಳಿಕ ವಾಸ್ತವಾಂಶ ತಿಳಿದು ಬರಬೇಕಿದೆ.