ಸುಳ್ಯ, ಮಾ 23(DaijiworldNews/AA): ಕೊಟ್ಟಿಗೆಯಲ್ಲಿ ದಾಸ್ತಾನು ಇರಿಸಿದ್ದ 5 ಗೋಣಿ ಚೀಲ ಸುಲಿದ ಅಡಿಕೆಯನ್ನು ಕಳವುಗೈದ ಆರೋಪಿಯನ್ನು ಬೆಳ್ಳಾರೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಸುಳ್ಯ, ಮಂಡೆಕೋಲು ಗ್ರಾಮದ ಕೊಡೆಂಚಿಕಾರ್ ಮನೆ ನಿವಾಸಿ ಸುಪ್ರೀತ್ ಕೆ (20) ಬಂಧಿತ ಆರೋಪಿ.
ಸುಳ್ಯ ಐವರ್ನಾಡು ಗ್ರಾಮದ ಕುಳ್ಳಂಪ್ಪಾಡಿ ಹಿರಿಯಣ್ಣ ಎಂಬವರ ಕೊಟ್ಟಿಗೆಯಲ್ಲಿ ದಾಸ್ತಾನು ಇರಿಸಿದ್ದ ಅಡಿಕೆಯು ಕಳವಾಗಿತ್ತು. ಈ ಹಿನ್ನೆಲೆ ಅವರು ಮಾ.14 ರಂದು ಕಳವಾಗಿರುವ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಪತ್ತೆಗೆ ವಿಶೇಷ ತನಿಖಾ ತಂಡ ರಚಿಸಿದ್ದರು. ಇದೀಗ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು 83 ಸಾವಿರ ರೂಪಾಯಿ ಮೌಲ್ಯದ 209 ಕೆ.ಜಿ. ಸುಲಿದ ಅಡಿಕೆ ಹಾಗೂ ಕೃತ್ಯಕ್ಕೆ ಬಳಸಿದ ರೂ 1 ಲಕ್ಷ ಮೌಲ್ಯದ ಆಟೋ ರಿಕ್ಷಾವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.