ಕಾಸರಗೋಡು, ಮಾ 23(DaijiworldNews/AA): ಬಾಡಿಗೆ ಮನೆಯೊಂದರಲ್ಲಿ ಸುಮಾರು 6.96 ಕೋಟಿ ರೂ. ನಕಲಿ ನೋಟು ಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆ ಕಾಸರಗೋಡಿನ ಅಂಬಲತ್ತರದಲ್ಲಿ ನಡೆದಿದೆ.
ಬೇಕಲ ಪೆರಿಯ ದ ಅಬ್ದುಲ್ ರಜಾಕ್ (49) ಮತ್ತು ಮವ್ವಾಲ್ ನ ಸುಲೈಮಾನ್ (52) ಬಂಧಿತರು.
ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಮೊಬೈಲ್ ಲೊಕೇಶನ್ ಮೂಲಕ ಪತ್ತೆಹಚ್ಚಿ ಕೇರಳದ ಸುಲ್ತಾನ್ ಬತ್ತೇರಿಯ ಖಾಸಗಿ ರೆಸಾರ್ಟ್ ನಿಂದ ಬಂಧಿಸಲಾಗಿದೆ. ಆರೋಪಿಗಳನ್ನು ಶನಿವಾರ ಮಧ್ಯಾಹ್ನ ಕಾಸರಗೋಡಿಗೆ ಕರೆ ತರಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ. ದಾಳಿ ನಡೆಸಿದ ದಿನ ಮಧ್ಯಾಹ್ನ ತನಕ ಅಬ್ದುಲ್ ರಜಾಕ್ ಮನೆಯಲ್ಲಿದ್ದರು. ದಾಳಿ ನಡೆಯುವ ಮುನ್ಸೂಚನೆ ಲಭಿಸುತ್ತಿದ್ದಂತೆ ಸ್ಥಳೀಯ ವ್ಯಾಪಾರಿಯೋರ್ವರ ಕಾರಿನಲ್ಲಿ ಪರಾರಿಯಾಗಿದ್ದನು. ಇಬ್ಬರನ್ನು ಪೊಲೀಸರು ವಿಚಾರಣೆ ನಡೆಸಲಾಗುತ್ತಿದೆ.