ಸುಳ್ಯ, ಮಾ 23(DaijiworldNews/MS): ದಕ್ಷಿಣ ಕನ್ನಡ-ಕೊಡಗು ಗಡಿ ಭಾಗದ ಮಡಿಕೇರಿ ತಾಲೂಕಿನ ಕೂಜಿಮಲೆ ಎಸ್ಟೇಟ್ ಪ್ರದೇಶಕ್ಕೆ ನಾಲ್ವರು ನಕ್ಸಲರು ಭೇಟಿ ನೀಡಿದ್ದ ಸಂಬಂಧ ನಕ್ಸಲ್ ನಿಗ್ರಹ ದಳದ ಶೋಧ ಐದನೇ ದಿನವಾದ ಶುಕ್ರವಾರವೂ ಮುಂದುವರಿದಿತ್ತು.
ಶುಕ್ರವಾರ ಕೂಜಿಮಲೆ, ಕಡಮಕಲ್ಲು, ಶಿಬಾಜೆ ಮಿತ್ತಮಜಲು, ಕುತ್ಲೂರು , ಕೇರಳ ಗಡಿ, ಸಂಪಾಜೆ ಸಮೀಪದ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸಲಾಗಿದೆ.ಆದರೆ ನಕ್ಸಲ್ ರ ಇರುವಿಕೆಯ ಕುರುಹ ಪತ್ತೆಯಾಗಿಲ್ಲ.
ಕೂಜಿಮಲೆ ಭಾಗದಲ್ಲಿ ಮಾ.16 ರಂದು ಅರಣ್ಯ ಇಲಾಖೆ ಸಿಬ್ಬಂದಿಯ ಸಮವಸ್ತ್ರದಲ್ಲಿ ನಕ್ಸಲರು ಕಾಣಿಸಿಕೊಂಡಿದ್ದರು. ಮರುದಿನ ಅವರು ಅರಣ್ಯ ಇಲಾಖೆಯ ಸಿಬ್ಬಂದಿಯಲ್ಲ, ನಕ್ಕಲರು ಎಂಬುವುದು ಅರಿವಿಗೆ ಬಂದಿತ್ತು. ಮರುದಿನ ಅವರು ಅರಣ್ಯ ಇಲಾಖೆಯ ಸಿಬ್ಬಂದಿಯಲ್ಲ, ನಕ್ಸಲರು ಎಂಬುವುದು ಅರಿವಿಗೆ ಬಂದಿತ್ತು. ಅವರು ಕಬನಿದಳಂ ಗುಂಪಿನ ಮಾವೋವಾದಿಗಳು ಎಂದು ಶಂಕೆ ತನಿಖೆ ವ್ಯಕ್ತವಾಗಿದೆ.