ಮಂಗಳೂರು, ಮಾ 21(DaijiworldNews/MS): ಲೋಕಸಭಾ ಚುನಾವಣೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ, ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕ್ರಿಮಿನಲ್ ಚಟುವಟಿಕೆಗಳಲ್ಲಿ ನಿರತರಾಗಿರುವ 10 ಮಂದಿ ರೌಡಿಶೀಟರ್ಗಳಿಗೆ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಗಡಿಪಾರು ಆದೇಶ ಹೊರಡಿಸಿದ್ದಾರೆ.
ಮಂಗಳೂರು ಕಸಬಾ ಬೆಂಗ್ರೆಯ ಸುಹೇಲ್ (21), ಕಣ್ಣೂರು ಜಾನಕಿತೋಟ ಕಂಪೌಂಡ್ನ ನಿಕ್ಷಿತ್ ಪೂಜಾರಿ ಯಾನೆ ನಿಶಿತ್ (21), ಉಳ್ಳಾಲ ಸೋಮೇಶ್ವರದ ಸುನೀಲ್ (24), ಕುದ್ರೋಳಿಯ ಲತೀಶ್ ನಾಯಕ್ ಯಾನೆ ಲತೀಶ್ ಯಾನೆ ಲತ್ಸ (34), ಉಳ್ಳಾಲ ಬಸ್ತಿಪಡ್ಪುವಿನ ಯತೀಶ್ (46), ಮುಲ್ಕಿ ಕಾರ್ನಾಡುವಿನ ಧಮಲಿಂಗ ಯಾನೆ ಧರ್ಮ (34), ಕಣ್ಣೂರು ದಯಾಂಬು ಹನೀಝ್ (32), ಮುಲ್ಕಿ ಚಿತ್ರಾಪುರದ ತೇಜ್ಪಾಲ್ ಆರ್ ಕುಕ್ಯಾನ್ (40), ವಾಮಂಜೂರು ಉಳಾಯಿಬೆಟ್ಟುವಿನ ಅನ್ಸಾರ್ (31), ಪಾಂಡೇಶ್ವರ ಶಿವನಗರದ ಅಭಿಷೇಕ್ ಯಾನೆ ಅಭಿ (29) ಎಂಬವರನ್ನು ಗಡಿಪಾರು ಮಾಡಲಾಗಿದೆ ಎಂದು ಪೊಲೀಸ್ ಪ್ರಕಟನೆ ತಿಳಿಸಿದೆ.
ಇದಕ್ಕೂ ಹಿಂದೆ ಅದಲ್ಲದೆ 367 ಮಂದಿಯಿಂದ ಮುಚ್ಚಳಿಕೆ, 19 ಮಂದಿ ವಿರುದ್ದ ಗಡಿಪಾರು ಹಾಗೂ ಮೂವರ ವಿರುದ್ದ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.