ಕಾಸರಗೋಡು, ಮಾ 20(DaijiworldNews/AK):ಜನವಾಸವಿಲ್ಲದ ಮನೆಯಿಂದ ಸುಮಾರು ಏಳು ಕೋಟಿ ರೂ. ನಗದನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ.
ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಪೊಲೀಸರು ಎರಡು ಸಾವಿರ ರೂ.ಮುಖಬೆಲೆಯ ನೋಟುಗಳನ್ನು ವಶಪಡಿಸಿ ಕೊಳ್ಳಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.
ಎರಡು ಸಾವಿರ ರೂ.ಮುಖಬೆಲೆಯ ಈ ನೋಟುಗಳು ರದ್ದು ಗೊಳಿಸಿದ್ದರೂ ಈ ನೋಟುಗಳು ಎಲ್ಲಿಂದ ತಲುಪಿದ್ದವು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.