ಮಂಗಳೂರು, ಮಾ 19(DaijiworldNews/AK): ಲೋಕಸಭಾ ಚುನಾವಣೆ-2024ರ ನೀತಿ ಸಂಹಿತೆ ಹಿನ್ನಲೆಯಲ್ಲಿ ಅಬಕಾರಿ ಇಲಾಖೆಯು 5760 ರೂ ಮೌಲ್ಯದ 11.74 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದ್ದು, 309500 ರೂ ಮೌಲ್ಯದ 1.441 ಕೆಜಿ ಮಾದಕ ದ್ರವ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಎಂಟು ವೀಕ್ಷಕರನ್ನು ನಿಯೋಜಿಸಲಾಗಿದ್ದು, 72 ಫ್ಲೈಯಿಂಗ್ ಸ್ಕ್ವಾಡ್, 69 ಸ್ಟ್ಯಾಟಿಕ್ ಸರ್ವೆಲೆನ್ಸ್ ತಂಡ ಮತ್ತು ಎಂಟು ಅಬಕಾರಿ ತಂಡಗಳನ್ನು ನಿಯೋಜಿಸಲಾಗಿದೆ.
ಜಿಲ್ಲೆಯ ಸಾರ್ವಜನಿಕ ಸ್ಥಳಗಳಲ್ಲಿ ಹಾಕಲಾದ ಬ್ಯಾನರ್, ಪೋಸ್ಟರ್ ಇತ್ಯಾದಿಯನ್ನು ಚುನಾವಣಾ ಹಿನ್ನೆಲೆಯಲ್ಲಿ ತೆರವುಗೊಳಿಸಲಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ ಕಚೇರಿಯ ಪ್ರಕಟನೆ ತಿಳಿಸಿದೆ.
128 ಗೋಡೆಬರೆಹಗಳನ್ನು ಅಳಿಸಲಾಗಿದೆ. 249 ಪೋಸ್ಟರ್ಗಳು, 859 ಬ್ಯಾನರ್ಗಳು, ಇತರ 114 ಸಹಿತ 1350 ಪ್ರಕರಣಗಳಿಗೆ ಸಂಬಂಧಿಸಿದಂತೆ ತೆರವು ಕಾರ್ಯಾಚರಣೆ ನಡೆಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.