ಬ್ರಹ್ಮಾವರ, ಮಾ 19(DaijiworldNews/MS): ಕೃಷಿಯಿಂದ ದೂರ ಸರಿಯುವ ಇಂದಿನ ಕಾಲಘಟ್ಟದಲ್ಲಿ ಕನ್ನಡ ಮಾಧ್ಯಮದ ಶಾಲೆಯ ವಿದ್ಯಾರ್ಥಿ ಗಳು ಸಾವಯವ ಮಿಶ್ರಕೃಷಿ ಮಾಡುವ ಮೂಲಕ ರಾಜ್ಯ ಕ್ಕೆ ಮಾದರಿಯಾಗಿದ್ದಾರೆ. ಬ್ರಹ್ಮಾವರ ತಾಲೂಕಿನ 38ನೆ ಕಳ್ತೂರು ಗ್ರಾಮದ ಸಂತೆಕಟ್ಟೆ ಹಿರಿಯ ಪ್ರಾಥಮಿಕ ಶಾಲೆ ಸಾವಯವ ಕೃಷಿ ಮೂಲಕ ಜನರ ಮನಗೆಲ್ಲುವಂತೆ ಮಾಡಿದೆ .ಇಲ್ಲಿ ಪಾಠದ ಜೊತೆ ಕೃಷಿ ಪಾಠವು ಮಕ್ಕಳಿಗೆ ನಿತ್ಯ ಭೋಧಿಸಲಾಗುತ್ತಿದೆ.
ವಿದ್ಯಾರ್ಥಿಗಳೇ ಕೃಷಿಕರು: ಶಾಲೆಯಲ್ಲಿ ಸ್ಪಂದನ ಪರಿಸರ ಸಂಘವನ್ನು ಸ್ಥಾಪಿಸಿದ್ಸು ಎಸ್ ಡಿ ಎಂ ಸಿ ಹಾಗೂ ಶಿಕ್ಷಕರ ಮಾರ್ಗದರ್ಶನ ಸ್ಥಳೀಯರ ಸಹಕಾರದಿಂದ ವಿದ್ಯಾರ್ಥಿಗಳೇ ಕೃಷಿಯನ್ನು ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಕೋಳಿಗೊಬ್ಬರ , ಹಟ್ಟಿ ಗೊಬ್ಬರ ವನ್ನು ಒದಗಿಸಿ ಸಾವಯವ ಕೃಷಿಗೆ ಒತ್ತುಕೊಟ್ಟಿದ್ದಾರೆ. ಗಂಜಲ ಬೇವಿನ ರಸ ಸಿಂಪಡಿಸಿ ಗಿಡಗಳಿಗೆ ರೋಗಗಳು ಬರದಂತೆ ನೋಡಿಕೊಂಡಿದ್ದಾರೆ.
ತುಂತುರು ನೀರಾವರಿ ಅಳವಡಿಕೆ : ತರಕಾರಿ ಗಿಡಗಳಿಗೆ ನೀರುಣಿಸಲು ಇಪ್ಪತೈದು ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕ್ ನಿರ್ಮಾಣ ಮಾಡಿದ್ದು ನೀರು ಪೋಲಾಗದಂತೆ ತಡೆಯಲು ಗಿಡಗಳಿಗೆ ತುಂತುರು ನೀರಾವರಿ ಯನ್ನು ಅಳವಡಿಸಲಾಗಿದೆ. ಈಗಾಗಲೇ ಬೆಂಡೆ 150 ಗಿಡಗಳು, ಮೂಲಂಗಿ 150 ಗಿಡಗಳು,ಇನ್ನೂರಕ್ಕು ಬಸಳೆಯ ಬಳ್ಳಿಗಳನ್ನು ನಡೆಲಾಗಿದೆ. ವಾರಕ್ಕೆ ಸುಮಾರು 20 ಕೆ.ಜಿ ಬಸಳೆ, 40 ಕೆಜಿ ಬೆಂಡೆ ಫಸಲು ಲಭಿಸುತ್ತದೆ.ಇದನ್ನು ಮಕ್ಕಳ ಬಿಸಿಯೂಟದ ಜೊತೆ ಪಲ್ಯಮಾಡಿ ಬಡಿಸಲಾಗುತ್ತದೆ.
ಪಾಠದ ಜೊತೆ ಕೆಸರು ಗದ್ದೆಯ ಆಟ: ಈ ಸರಕಾರಿ ಶಾಲೆಯಲ್ಲಿ ಸ್ಪಂದನ ಪರಿಸರ ಸಂಘವನ್ನು ಸ್ಥಾಪಿಸುವ ಮೂಲಕ ಸಾಲು ಗದ್ದೆ ನಾಟಿ, ಕೆಸರುಗದ್ದೆಓಟ ಅಡಿಕೆ ಹಾಳೆಯ ಓಟ ವಿವಿಧ ಆಟೋಟಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಕೃಷಿ ಗೆ ಒತ್ತು ನೀಡಲಾಗುತ್ತದೆ.ಕುದುರೆಮುಖ ವಲಯದ ವನ್ಯಜೀವಿ ವಿಭಾಗ ಹೆಬ್ರಿ ವಲಯದ ಮೂಲಕ ಚಿನ್ನರ ವನ ದರ್ಶನ ಕಾರ್ಯಕ್ರಮ ವನ್ನು ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಪ್ರಾಣಿ ಪ್ರಭೇದಗಳು, ಗಿಡಮರಗಳ ಪರಿಚಯವನ್ನು ಮಾಡಿಸಲಾಗುತ್ತದೆ..
ವಿದ್ಯಾರ್ಥಿಗಳ ಸಂಖ್ಯೆ ಏರಿಕೆ: ಕಳೆದ ಬಾರಿ ಶಾಲೆಯಲ್ಲಿ ವಿದ್ಯಾರ್ಥಿ ಗಳ ಸಂಖ್ಯೆ 169 ಯಿದ್ದು ಈ ಬಾರಿ ಪ್ರಶಕ್ತ ಶೈಕ್ಷಣಿಕ ವರ್ಷದ ಲ್ಲು 187 ಕ್ಕೆ ಏರಿಕೆ ಯಾಗಿದೆ. ಹೊಸೂರು ,ಸಂತೆಕಟ್ಟೆ , ಶಿವಪುರ ನಾಲ್ಕೂರು ಕೆಂಜೂರು,ಕೆರೆಬೆಟ್ಟು ಗ್ರಾಮಗಳ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತಿದ್ದಾರೆ ,ಮೂರು ಜನ ಶಿಕ್ಷಕರು, ಮತ್ತು 6 ಶಿಕ್ಷಕಿಯರು ವಿದ್ಯಾರ್ಥಿ ಗಳಿಗೆ ಪಾಠ ಕೃಷಿ ಪಠ್ಯೇತರ ಚಟುವಟಿಕೆಗಳಿಗೆ ಮಾರ್ಗದರ್ಶನ ನೀಡುತಿದ್ದಾರೆ.
ಕ್ರೀಡೆಗೆ ಹೆಚ್ಚು ಒತ್ತು : ರಾಜ್ಯ ಹಾಗೂ ರಾಷ್ಟ್ರದ ಮಟ್ಟದಲ್ಲಿ ಈ ಶಾಲಾ ವಿದ್ಯಾರ್ಥಿಗಳು ಸಾಧನೆ ಗೈದಿದ್ದಾರೆ. ಕುಮಾರಿ ರಂಜಿತಾ ಯೋಗದಲ್ಲಿ ರಾಷ್ಟ್ರಮಟ್ಟದಲ್ಲಿ, ದೇವಣ್ಣ ನಾಯ್ಕ ಮತ್ತು ಸಂದೀಪ್ ಮತ್ತಿತರರು ಅತ್ಲೆಟಿಕ್ಸ್ ರಾಜ್ಯಮಟ್ಟದಲ್ಲಿ ಕ್ರೀಡೆಯಿಂದ ಪ್ರತಿನಿಧಿಸಿದ್ದಾರೆ. ಗಣರಾಜ್ಯೋತ್ಸವ ಹಾಗೂ ಕನ್ನಡ ರಾಜ್ಯೋತ್ಸವದ ಉಡುಪಿ ಜಿಲ್ಲಾ ಪಥಸಂಚಲನದಲ್ಲಿ ಸತತ 15 ವರ್ಷಗಳಿಂದ ಮೊದಲ ಸ್ಥಾನದಲ್ಲಿ ಪ್ರಶಸ್ತಿ ಪಡೆಯುತ್ತಿದೆ. ಶಾಲೆಯಲ್ಲಿ ಉತ್ತಮ ವಿದ್ಯಾರ್ಥಿ ಬ್ಯಾಂಡ್ ತಂಡವನ್ನು ಹೊಂದಿದ್ದು ತಾಲೂಕು,ರಾಜ್ಯ ಮಟ್ಟದ ಕ್ರೀಡಾಕೂಟಗಳಲ್ಲಿ ಹಿಮ್ಮೇಳದಲ್ಲಿ ಬ್ಯಾಂಡ್ ತಂಡವು ಭಾಗವಹಿಸುತ್ತಿದೆ. . ಶಿಕ್ಷಣದಲ್ಲಿ ವಲಯ ಮಟ್ಟದಲ್ಲಿ ಉತ್ತಮ ಶಾಲಾ ಪ್ರಶಸ್ತಿ ಪಡೆದಿದೆ. ಮುಂದಿನ 2028 ಕ್ಕೆ ಶಾಲೆಯು ಶತಮಾನದ ಹೊಸ್ತಿಲಲ್ಲಿದೆ.
"ಪಾಠದ ಜೊತೆ ಕೃಷಿ ಸ್ನೇಹಿ ಪರಿಸರ ನಿರ್ಮಾಣ ಮಾಡುವ ಮೂಲಕ ವಿದ್ಯಾರ್ಥಿಗಳ ಮನೋವಿಕಸನಕ್ಕೆ ದಾರಿಯಾಗುತ್ತದೆ. ಕ್ರೀಡೆಯಲ್ಲಿಯು ಶಾಲಾ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿದ್ದಾರೆ". ಸುರೇಶ್ ಚಂದ್ರ ಬಾಬು ದೈಹಿಕ ಶಿಕ್ಷಕರು "ಸ್ಪಂದನ " ಶಾಲಾ ಪರಿಸರ ಸಂಘ ನೋಡಲ್ ಅಧಿಕಾರಿ
"ಶಾಲೆಯ ಸಾಧನೆಯನ್ನು ಗುರುತಿಸಿ ಜೆಸಿಐ ಹೆಬ್ರಿ, ಲಯನ್ಸ್ ಕ್ಲಬ್ , ಗಣೇಶೋತ್ಸವ ಸಮಿತಿಗಳು ಗುರುತಿಸಿವೆ. ಈ ಬಾರಿ ವಿದ್ಯಾರ್ಥಿಗಳ ಸಂಖ್ಯೆ ಗಮನಾರ್ಹ ವಾಗಿ ಏರಿಕೆಯಾಗಿದೆ. ಈ ಶೈಕ್ಷಣಿಕ ವರ್ಷದಲ್ಲಿ ಇನ್ನೂ ಹೆಚ್ಚಿನ ವಿದ್ಯಾರ್ಥಿ ಗಳು ಏರಿಕೆಯಾಗುವ ಸಾಧ್ಯತೆ ಇದೆ.ಕೃಷಿಯಿಂದ ರೈತರು ವಿಮುಖರಾಗಬಾರದು ಅದಕ್ಕಾಗಿ ಕೃಷಿ ಪಾಠವನ್ನು ವಿದ್ಯಾರ್ಥಿಗಳ ಎಳವೆಯಲ್ಲಿ ಹೇಳಿಕೊಟ್ಟರೆ ಒಳ್ಳೆಯದು": ಮಾಧವ ಮುಖ್ಯೋಪಾಧ್ಯಾಯರು ಸಂತೆಕಟ್ಟೆ ಹಿರಿಯ ಪ್ರಾಥಮಿಕ ಶಾಲೆ
"ಹಳ್ಳಿಯ ಕೃಷಿಕುಟುಂಬದ ವಿದ್ಯಾರ್ಥಿಗಳ ಈಶಾಲೆಯಲ್ಲಿ ಕಲಿಯುತಿದ್ದಾರೆ. ಆದ್ದರಿಂದ ಪಾಠದ ಜೊತೆ ಕೃಷಿಯಲ್ಲಿ ಖುಷಿ ಯಿಂದ ತೊಡಗಿಕೊಳ್ಳುತ್ತಾರೆ.ಪೋಷಕರ ಸಹಕಾರವು ಸಾವಯವ ಕೃಷಿ ಗೆ ಒತ್ತು ನೀಡುತಿದ್ದಾರೆ".ರಾಜೇಶ್ ಪೂಜಾರಿ ಎಸ್ ಡಿ ಎಂ ಸಿ ಅಧ್ಯಕ್ಷರು