ಮಂಗಳೂರು, ಮಾ 19(DaijiworldNews/MS): ನಗರದ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಮೂಲಸೌಕರ್ಯಗಳ ಕೊರತೆಯಿಂದಾಗಿ ರೋಗಿಗಳಿಗೆ ತೊಂದರೆಗಳಾಗುತ್ತಿದ್ದು ಇದಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಕಾರಣರಾಗಿದ್ದಾರೆ. ಹಾಗಾಗಿ ಅವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಗರದ ನಿವಾಸಿಯೋರ್ವರು ದೂರು ನೀಡಿದ್ದಾರೆ.
ಸೋಮವಾರ ನಗರದಲ್ಲಿ ನಡೆದ ಅಪಘಾತದಲ್ಲಿ ೭೦ ವಯಸ್ಸಿನ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಯೊಬ್ಬರನ್ನು ವೆನ್ಲಾಕ್ ಕರೆದುಕೊಂಡು ಹೋದಾಗ ಚಿಕಿತ್ಸೆ ಸಿಗಲಿಲ್ಲ. ತುರ್ತು ಚಿಕಿತ್ಸಾ ಸಿಗಲಿಲ್ಲ, ತುರ್ತು ಚಿಕಿತ್ಸಾ ವಿಭಾಗದಲ್ಲಿ ೫ ಬೆಡ್ ಗಳು ಮಾತ್ರ ಇವೆ. ಅಲ್ಲಿ ಬೆಡ್ ಕೊರತೆ ಇದ್ದು, ಹಾಸಿಗೆ ಸಿಗದೆ ಹಲವಾರು ರೋಗಿಗಳು ಹೊರಗೆ ನರಳಾಡುತ್ತಿದ್ದರು. ನುರಿತ ವೈದ್ಯರ ಕೊರತೆಯೂ ಇದ್ದು, ಖಾಸಗಿ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿಗಳು ಚಿಕಿತ್ಸೆ ಕೊಡಬೇಕಾದ ಪರಿಸ್ಥಿತಿ ಇದೆ. ಸಚಿವರು ಜನರ ಹಕ್ಕನ್ನು ಒದಗಿಸಿಕೊಡುವಲ್ಲಿ ವಿಫಲರಾಗಿದ್ದಾರೆ ಅವರ ವಿರುದ್ದ ಸೂಕ್ತ ತನಿಖೆ ಕೈಗೊಳ್ಳಬೇಕು ಎಂದು ಎಚ್ ಶಶಿಧರ್ ಶೆಟ್ಟಿ ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ.