ವಿಟ್ಲ, ಮಾ 15(DaijiworldNews/ AK):ಅಡ್ಯನಡ್ಕ ಕರ್ನಾಟಕ ಬ್ಯಾಂಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರು ಆರೋಪಿಗಳನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರ ವಿಶೇಷ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳಾದ ಬಂಟ್ವಾಳ ತಾಲೂಕು ಬಿಮೂಡಾ ಗ್ರಾಮದ ನಿವಾಸಿ ಮಹಮ್ಮದ್ ರಫೀಕ್(35), ಮಂಜೇಶ್ವರ ತಾಲೂಕು ಮೊಗ್ರಾಳ, ಉಪ್ಪಳ ಅಂಚೆ ನಿವಾಸಿ ಇಬ್ರಾಹಿಂ ಕಲಂದರ್ (41), ಮಂಜೇಶ್ವರ ತಾಲೂಕು ಬಾಯಾರು ಗ್ರಾಮದ ಗಾಳಿಯಡ್ಕ ನಿವಾಸಿ, ದಯಾನಂದ ಎಸ್(37) ಬಂಧಿಸಲಾಗಿದೆ.
ಫೆ. 7 ರಂದು ರಾತ್ರಿ ಬಂಟ್ವಾಳ ತಾಲೂಕು ಕೇಪು ಗ್ರಾಮದ ಅಡ್ಯನಡ್ಕದಲ್ಲಿರುವ ಕರ್ನಾಟಕ ಬ್ಯಾಂಕಿನ ಕೀಟಕಿಯ ಸರಳಗಳನ್ನು ತುಂಡರಿಸಿ, ಗ್ಯಾಸ್ ಕಟರ್ನಿಂದ ಸ್ಟ್ರಾಂಗ್ ರೂಮಿನ ಬಾಗಿಲನ್ನು ತುಂಡರಿಸಿ ಒಳ ಪ್ರವೇಶಿಸಿ 17,28,735 ರೂ ನಗದು ಹಾಗೂ 696.21 ಗ್ರಾಂ ಚಿನ್ನಭರಣ ಮತ್ತು 1,00,000 ಮೌಲ್ಯದ ಬೆಳ್ಳಿ ಕಳ್ಳತನವಾಗಿದೆ. ಈ ಬಗ್ಗೆ ಕಳ್ಳತನದ ಬಗ್ಗೆ ವಿಟ್ಲ ಠಾಣಾ ಅ.ಕ್ರ. 25/2024 ಕಲಂ:457,380 ಬಾಧಂಸಂ ರಂತೆ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ಪತ್ತೆ ಬಗ್ಗೆ ವಿಶೇಷ ತಂಡ ರಚಿಸಿ ತನಿಖೆ ಮಾಡಿ ಮಾ. ೧೦ ರಂದು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಿ 2,40,700 ರೂ ನಗದು , ಕಳ್ಳತನದ ಹಣದಿಂದ ಖರೀದಿಸಿದ ಗೃಹ ಉಪಯೋಗಿ ಸಾಮಗ್ರಿಗಳ ಮೌಲ್ಯ -2 ಲಕ್ಷ ಒಟ್ಟು ರೂ. 4,40,700 ಹಾಗೂ ರೂ. 12,48,218 ರೂ. ಮೌಲ್ಯದ ಚಿನ್ನಾಭರಣ, ಹಾಗೂ ಕಳ್ಳತನಕ್ಕೆ ಉಪಯೋಗಿಸಿದ ಕೆಎ-01-ಎನ್ಜಿ-2227ನೇ ನೊಂದಣಿ ನಂಬ್ರದ ಬ್ರೀಝಾ ಕಾರು -01 ಗ್ಯಾಸ್ ಕಟರ್ ಹಾಗೂ ಇತರೆ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಿಂದ ಸ್ವಾಧೀನಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ- 25,70,918/- ರೂ ಎಂದು ಗುರುತಿಸಲಾಗಿದೆ.
ಆರೋಪಿ ಮಹಮ್ಮದ್ ರಫೀಕ್ ಎಂಬಾತನ ವಿರುದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ 2 ಪ್ರಕರಣ, ದಕ್ಷಿಣ ಕನ್ನಡ ಜಿಲ್ಲೆಯ ವೇಣೂರು ಪೊಲೀಸ್ ಠಾಣೆಯಲ್ಲಿ 2 ಪ್ರಕರಣ, ಮಂಗಳೂರು ನಗರ ಪೂರ್ವ ಪೊಲೀಸ್ ಠಾಣೆಯಲ್ಲಿ 1, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಠಾಣಾಯಲ್ಲಿ-1, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 1, ಮಂಗಳೂರು ನಗರದ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಠಾಣಾ 4, ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಠಾಣಾಯಲ್ಲಿ-1 , ಬೆಂಗಳೂರು ನಗರದ ವ್ಯಾಪ್ತಿಯಲ್ಲಿ -6 , ಮಂಗಳೂರು ನಗರದ ಪೂರ್ವ ಪೊಲೀಸ್ ಠಾಣೆಯಲ್ಲಿ -1, ಉಡುಪಿ ಜಿಲ್ಲೆಯಲ್ಲಿ-3, ವಿಟ್ಲ ಪೊಲೀಸ್ ಠಾಣೆಯಲ್ಲಿ -1, ಒಟ್ಟು 23 ಪ್ರಕರಣಗಳು ದಾಖಲಾಗಿದೆ.
ಆರೋಪಿ ಇಬ್ರಾಹಿಂ ಕಲಂದರ್ ಎಂಬಾತನ ವಿರುದ್ದ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ 2 ಪ್ರಕರಣ, ವಿಟ್ಲ ಪೊಲೀಸ್ ಠಾಣೆಯಲ್ಲಿ 03, ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ 01, ಮೂಡಬಿದ್ರೆ ಠಾಣೆಯಲ್ಲಿ 01 ಕೇರಳ ರಾಜ್ಯದ ಕುಂಬ್ಳೆ ಪೊಲೀಸ್ ಠಾಣೆಯಲ್ಲಿ-01 ಒಟ್ಟು-08 ಪ್ರಕರಣಗಳು ದಾಖಲಾಗಿರುತ್ತವೆ.
ಆರೋಪಿ ದಯಾನಂದ ಎಸ್. ವಿಟ್ಲ ಪೊಲೀಸ್ ಠಾಣೆಯಲ್ಲಿ-01 ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದಲ್ಲಿ ಇನ್ನೂ 2 ಜನ ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ನಡೆಯುತ್ತಿದೆ.ಆರೋಪಿ ಪತ್ತೆಯ ಕಾರ್ಯಾಚರಣೆಯನ್ನು ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸಿ ಬಿ ರಿಷ್ಯಂತ್ ಐ.ಪಿ.ಎಸ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಧರ್ಮಪ್ಪ ಎನ್ ಎಂ ಹಾಗೂ ರಾಜೇಂದ್ರ ಡಿ ಎಸ್ ರವರ ಮಾರ್ಗದರ್ಶನದಂತೆ ಬಂಟ್ವಾಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಎಸ್. ವಿಜಯ ಪ್ರಸಾದ್ ರವರ ನಿರ್ದೇಶನದಂತೆ, ವಿಟ್ಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ನಾಗರಾಜ್ ಹೆಚ್ ಈ ರವರ ನೇತ್ರತ್ವದಲ್ಲಿ ಪೊಲೀಸ್ ಉಪ ನಿರೀಕ್ಷಕರಾದ ನಂದಕುಮಾರ್, ಉದಯರವಿ, ಹರೀಶ್ ಕುಮಾರ್, ವಿದ್ಯಾ ಕೆ.ಜೆ. ಸಿಬ್ಬಂಧಿಗಳಾದ ವೆಂಕಟರಮಣ ಗೌಡ, ಪ್ರವೀಣ್ ಮೂರುಗೋಳಿ, ಉದಯ ರೈ, ರಕ್ಷೀತ್ ರೈ , ಪ್ರವೀಣ್ ರೈ ಪಾಲ್ತಾಡಿ, ಅದ್ರಾಮ, ಕರುಣಾಕರ, ರಾಹುಲ್ ರಾವ್, ಶ್ರೀಧರ ಸಿ ಎಸ್, ಜಗದೀಶ್ ಅತ್ತಾಜೆ, ಹೇಮರಾಜ್, ಅಶೋಕ್, ವಿವೇಕ್ ಕೆ., ಕುಮಾರ್ ಹೆಚ್.ಕೆ. , ಸಂಪತ್, ದಿವಾಕರ್, ಸಂತೋಷ್ ,ಕುಮಾರ್ ಮಾಯಪ್ಪರವರು ಭಾಗವಹಿಸಿರುತ್ತಾರೆ. ತಂಡಕ್ಕೆ ಮಾನ್ಯ ಪೊಲೀಸ್ ಅಧೀಕ್ಷಕರು ನಗದು ಬಹುಮಾನ ಘೋಷಿಸಿದ್ದಾರೆ.