ಬೆಳ್ತಂಗಡಿ, ಮಾ 15(DaijiworldNews/MS): ಯೂಟ್ಯೂಬ್ ಚಾನೆಲ್ ಕಚೇರಿಗೆ ಪ್ರವೇಶಿಸಿ ವ್ಯಕ್ತಿಯೊಬ್ಬ ಲಕ್ಷಾಂತರ ರೂಪಾಯಿ ಮೌಲ್ಯದ ವೀಡಿಯೋ ಕ್ಯಾಮೆರಾ, ಸಿಸಿ ಟಿವಿ ಹಾಗೂ ಸಾವಿರಾರು ರೂಪಾಯಿ ನಗದು ದೋಚಿದ ಘಟನೆ ಬೆಳ್ತಂಗಡಿ ತಾಲೂಕಿನ ಸಂತೆಕಟ್ಟೆಯಲ್ಲಿ ನಡೆದಿದೆ. ಆರೋಪಿಯನ್ನು ಪ್ರತೀಕ್ ಕೋಟ್ಯಾನ್ ಎಂದು ಗುರುತಿಸಲಾಗಿದೆ.
ಸಂತೆಕಟ್ಟೆಯ ಸುವರ್ಣ ಆಕೇರ್ಡ್ನಲ್ಲಿ ಸುದೀಪ್ ಅವರು ತಮ್ಮ ಯೂಟ್ಯೂಬ್ ಚಾನಲ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ಗುರುವಾರ ಸಂಜೆ ಆರೋಪಿ ಪ್ರತೀಕ್ ಕೋಟ್ಯಾನ್ ಕಛೇರಿಗೆ ಸುದೀಪ್ ಅವರು ಸಂತೆಕಟ್ಟೆ ಸುವರ್ಣ ಆಕೇರ್ಡ್ ಸಂಕೀರ್ಣದಲ್ಲಿ ಯೂಟ್ಯೂಬ್ ಚಾನಲ್ ನಡೆಸುತ್ತಿದ್ದು, ಗುರುವಾರ ಸಂಜೆ ಆರೋಪಿ ಪ್ರತೀಕ್ ಕೋಟ್ಯಾನ್ ಕಛೇರಿಗೆ ಬಂದು, ಅಲ್ಲಿ ಕೆಲಸ ಮಾಡುತ್ತಿದ್ದ ಕೃಪೇಶ್ ಎಂಬಾತನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಛೇರಿಯಲ್ಲಿದ್ದ 4.80 ಲಕ್ಷ ರೂಪಾಯಿ ಮೌಲ್ಯದ ವೀಡಿಯೋ ಕ್ಯಾಮರಾಗಳು, ಸುಮಾರು 7 ಸಾವಿರ ರೂಪಾಯಿ ಮೌಲ್ಯದ ಸಿಸಿ ಕ್ಯಾಮರಾ ಹಾಗೂ ಕ್ಯಾಶ್ ಡ್ರಾಯರಿನಲ್ಲಿದ್ದ ಸುಮಾರು 62 ಸಾವಿರ ರೂಪಾಯಿ ನಗದು ಹಣ ಸಹಿತ ಒಟ್ಟು 5.49 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ದೋಚಿದ್ದಾನೆ.
ಈ ಬಗ್ಗೆ ಸುದೀಪ್ ಅವರು ಆರೋಪಿ ಪ್ರತೀಕ್ ಕೋಟ್ಯಾನಗೆ ಕರೆಮಾಡಿ ವಿಚಾರಿಸಿದಾಗ, ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 36/2024 ಕಲಂ 504, 506, 392 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.