ಕಾಸರಗೋಡು, ಮಾ 15(DaijiworldNews/MS): ಲೋಕಸಭಾ ಚುನಾವಣೆಯ ಮತ ಎಣಿಕಾ ಕೇಂದ್ರವಾದ ಪೆರಿಯ ಕೇಂದ್ರೀಯ ವಿಶ್ವವಿದ್ಯಾನಿಲಯ ಕೇಂದ್ರಕ್ಕೆ ಜಿಲ್ಲಾಧಿಕಾರಿ ಕೆ.ಇಂಪಾಶೇಖರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠ ಪಿ.ಬಿಜೋಯ್ ಜಂಟಿ ಪರಿಶೀಲನೆ ನಡೆಸಿದರು.
ಕಾಸರಗೋಡು ಲೋಕಸಭಾ ಕ್ಷೇತ್ರದ ಎಲ್ಲಾ ಏಳು ಕ್ಷೇತ್ರಗಳಲ್ಲಿ ಮತಯಂತ್ರಗಳನ್ನು ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಇಡಲಾಗುವುದು. ಪೊಲೀಸರು ಭದ್ರತಾ ತಪಾಸಣೆಯನ್ನೂ ನಡೆಸಿದರು.ಸಹಾಯಕ ಚುನಾವಣಾಧಿಕಾರಿಗಳು, ಸಬ್ ಕಲೆಕ್ಟರ್ ಸುಫಿಯಾನ್ ಅಹಮದ್, ಆರ್ಡಿಒ ಪಿ. ಬಿನುಮೋನ್, ಎಲ್ಎ ಡೆಪ್ಯೂಟಿ ಕಲೆಕ್ಟರ್ ನಿರ್ಮಲ್ ರೀಟಾ ಗೋಮ್ಸ್, ಎಲ್ಆರ್ ಡೆಪ್ಯೂಟಿ ಕಲೆಕ್ಟರ್್ ಜೆಗ್ಗಿ ಪಾಲ್, ಆರ್ಆರ್ ಡೆಪ್ಯೂಟಿ ಕಲೆಕ್ಟರ್ ಪಿ.ಶಾಜು, ಡೆಪ್ಯೂಟಿ ಕಲೆಕ್ಟರ್ (ಚುನಾವಣೆ) ಪಿ.ಅಖಿಲ್ ಜೊತೆಗೆ ಸಂಬಂಧಪಟ್ಟ ನೋಡಲ್ ಅಧಿಕಾರಿಗಳು, ಎಲೆಕ್ಟ್ರಿಕಲ್ ರಿಜಿಸ್ಟರ್ ಅಧಿಕಾರಿಗಳು ಮುಂತಾದವರು ಉಪಸ್ಥಿತರಿದ್ದರು .