ಉಡುಪಿ, ಮಾ 14(DaijiworldNews/AA): ತನ್ನ ಸ್ವಂತ ಬಸ್ ನ ಚಕ್ರದಡಿ ಸಿಲುಕಿ ಬಸ್ ಮಾಲಕ ದಾರುಣವಾಗಿ ಮೃತಪಟ್ಟ ಘಟನೆ ಮಣಿಪಾಲ ಆತ್ರಾಡಿ ಬಳಿಯ ಗ್ಯಾರೇಜ್ ಒಂದರಲ್ಲಿ ನಡೆದಿದೆ.
ಮಾಂಡವಿ ಬಸ್ ಮಾಲಕ ದಯಾನಂದ್ ಶೆಟ್ಟಿ ಮೃತ ದುರ್ದೈವಿ.
ದಯಾನಂದ್ ಶೆಟ್ಟಿ ಅವರು ರಿಪೇರಿಗೆ ನಿಲ್ಲಿಸಿದ್ದ ಬಸ್ ಅನ್ನು ಪರಿಶೀಲಿಸಲು ಗ್ಯಾರೇಜ್ ಗೆ ಬಂದಿದ್ದರು. ಈ ವೇಳೆ ಅವರು ಬಸ್ ಮುಂದೆ ನಿಂತಿರುವ ಅರಿವಿಲ್ಲದೆ ಮೆಕ್ಯಾನಿಕ್ ಬಸ್ ಚಲಾಯಿಸಿದ್ದಾನೆ. ಪರಿಣಾಮ ಮುಂದೆ ನಿಂತಿದ್ದ ದಯಾನಂದ್ ಅವರ ಮೇಲೆ ಬಸ್ ನ ಚಕ್ರಗಳು ಹರಿದು ಮೃತಪಟ್ಟಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.