ಕಾಸರಗೋಡು, ಮಾ 13(DaijiworldNews/MS): ಮುಂದಿನ ಶೈಕ್ಷಣಿಕ ವರ್ಷದ ಕೇರಳ ಶಾಲಾ ಪಠ್ಯ ಪುಸ್ತಕಗಳು ಕಾಸರಗೋಡು ಸರಕಾರಿ ಕಾಲೇಜಿನ ಜಿಲ್ಲಾ ಹಬ್ ಗೆ ಮಂಗಳವಾರ ತಲುಪಿವೆ. ಎರಡು , ನಾಲ್ಕು , ಆರು , ಎಂಟು , ಹತ್ತನೇ ತರಗತಿಯ ಮಲಯಾಳ , ಇಂಗ್ಲೀಷ್ , ಕನ್ನಡ ಮಾಧ್ಯಮಗಳ ಪಠ್ಯ ಪುಸ್ತಕಗಳು ವಿತರಣೆಗೆ ತಲುಪಿದ್ದು , ಕೆಲ ತರಗತಿಗಳ ಪುಸ್ತಕಗಳು ಬದಲಾಗಿವೆ. ಈ ಪುಸ್ತಕಗಳು ಮೇ ತಿಂಗಳಲ್ಲಿ ತಲಪಲಿವೆ.
ಐದು ವರ್ಷಗಳಿಂದ ಕುಟುಂಬಶ್ರೀ ಪಠ್ಯ ಪುಸ್ತಕ ವಿತರಣೆಯ ಜವಾಬ್ದಾರಿ ಹೊಂದಿದೆ.ಪಠ್ಯ ಪುಸ್ತಕಗಳ ಜಿಲ್ಲಾ ಮಟ್ಟದ ಉದ್ಘಾಟನೆ ಯನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು.ಜಿಲ್ಲಾ ಶಿಕ್ಷಣ ಇಲಾಖಾ ಉಪನಿರ್ದೇಶಕ ಎನ್ . ನಂದಿಕೇಶನ್ ಅಧ್ಯಕ್ಷತೆ ವಹಿಸಿದ್ದರು.ಕಾಸರಗೋಡು ಸರಕಾರಿ ಹಯರ್ ಸೆಕಂಡರಿ ಶಾಲೆಯ ಮುಖ್ಯೋಪಾ ಧ್ಯಾಯಿನಿ ಉಷಾ ಪುಸ್ತಕಗಳನ್ನು ಪಡೆದರು.
ಡಯಟ್ ಪ್ರಾಂಶುಪಾಲ ಡಾ . ರಘುರಾಮ್ ಭಟ್ , ಕುಟುಂಬಶ್ರೀ ಜಿಲ್ಲಾ ಮಿಷನ್ ಸದಸ್ಯ ಇ . ಶಿಬಿ , ಕೆ . ಬಿಜುರಾಜ್ , ಬಿ. ಸುರೇಂದ್ರನ್ , ಸುನಿತ್ ಕುಮಾರ್ , ಆಗಸ್ಟಿನ್ ಬರ್ನಾಡ್ , ವಲ್ಸರಾಜ್ , ಬಾಬು ರಾಜ್ , ಬಷೀರ್ , ಡಿಪೋ ಮೇಲ್ವಿಚಾರಕ ಅರ್ಷನ್ ಮೊದಲಾದವರು ಮಾತನಾಡಿದರು. ಜಿಲ್ಲಾ ಉಪ ಶಿಕ್ಷಣಾಧಿಕಾರಿ ದಿನೇಶ್ ಸ್ವಾಗತಿಸಿದರು.