ಮಂಗಳೂರು, ಮಾ 12(DaijiworldNews/AA): ಸರ್ಕ್ಯೂಟ್ ಹೌಸ್ ನಿಂದ ಬಿಜೈ ರಸ್ತೆಗೆ ಜಾರ್ಜ್ ಫರ್ನಾಂಡೀಸ್ ಹೆಸರು ನಾಮಕರಣ ಮಾಡಲು ಅನುಮತಿ ಸಿಕ್ಕಿದೆ. ಈ ರಸ್ತೆಗೆ ನಾಮಕರಣವನ್ನು ಚುನಾವಣೆ ಬಳಿಕ ಇಡಲಿದ್ದೇವೆ ಎಂದು ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ತಿಳಿಸಿದ್ದಾರೆ.
ಸರ್ಕ್ಯೂಟ್ ಹೌಸ್ ನಿಂದ ಬಿಜೈ ರಸ್ತೆಗೆ ಜಾರ್ಜ್ ಫರ್ನಾಂಡೀಸ್ ಹೆಸರು ನಾಮಕರಣ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಂಗಳೂರು ಮನಪ ಸಾಮಾನ್ಯ ಸಭೆಯಲ್ಲಿ ಜಯನಂದ್ ಅಂಚನ್ ಅವರ ಅವಧಿಯಲ್ಲಿ ರಸ್ತೆ ಮರುನಾಮಕರಣದ ಬಗ್ಗೆ ಮನವಿ ಸಲ್ಲಿಸಲಾಗಿತ್ತು. ಜಾರ್ಜ್ ಅವರು 9 ಲೋಕಸಭಾ ಚುನಾವಣೆಯಲ್ಲಿ ಗೆದ್ದ ಕಾರ್ಮಿಕ ನಾಯಕ. ಅವರು ಮಂಗಳೂರಿಗೆ ಕೊಂಕಣ್ ರೈಲ್ವೆ ಸೇವೆ ಒದಗಿಸಿದ್ದಾರೆ ಎಂದರು.
ಇಂತಹ ಮಹಾನ್ ವ್ಯಕ್ತಿ ದೇಶದ ಪ್ರಧಾನಿ ಮೋದಿ ಪದ್ಮವಿಭೂಷಣ ನೀಡಿದ್ದಾರೆ. ಕೊಂಕಣಿ ಲೇಖಕರ ಸಂಘದ ಸಂಚಾಲಕ ರಿಚಾರ್ಡ್ ಮೋರಸ್ ಅವರು ಕೂಡ ರಸ್ತೆಗೆ ಮರುನಾಮಕರಣ ಮಾಡುವಂತೆ ಮನವಿ ಮಾಡಿದ್ದರು. ರಸ್ತೆ ಮರುನಾಮಕರಣದ ಬಗ್ಗೆ ತಕ್ಷಣ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ಧರಾಮಯ್ಯ ಹಾಗೂ ಸಚಿವ ಭೈರತಿ ಸುರೇಶ್ ಅವರಿಗೆ ಧನ್ಯವಾದಗಳು ಎಂದು ಹೇಳಿದರು.
ಇನ್ನು ನೀರಿನ ಕೊರತೆ ವಿಚಾರವಾಗಿ ಮಾತನಾಡಿದ ಅವರು, ಈಗಾಗಲೇ ಮನಪ ವ್ಯಾಪ್ತಿಯಲ್ಲಿ ನೀರಿನ ಕೊರತೆ ಇಲ್ಲ. ಈ ಭಾರಿ ಬೇಸಿಗೆಗೆ ನೀರಿನ ಸಮಸ್ಯೆ ಆಗುದಿಲ್ಲ. ಈಗಾಗಲೇ ಜಿಲ್ಲಾಧಿಕಾರಿ ಕೈಗಾರಿಕೆಗಳಿಗೆ ಸೂಚನೆ ನೀಡಿದ್ದಾರೆ. ನೀರಿನ ಮಿಥ ಬಳಕೆ ಮಾಡುವಂತೆ ಕೈಗಾರಿಕ, ಕೃಷಿಕರಿಗೆ ಸೂಚಿಸಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿರುವ ಜನರು ಮಿಥ ಬಳಕೆ ಮಾಡಬೇಕು. ಇದರಿಂದ ನೀರಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬಹುದು. ನೀರಿನ ದುರ್ಬಳಕೆ ಮಾಡುವವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ. ನಗರದ 41, 29, 30, 42, 43, 27 ಕಾಮಗಾರಿ ವೇಳೆ ನೀರಿನ ಸಮಸ್ಯೆ ಆಗಿತ್ತು. ಈಗಾ ಎಲ್ಲಾ ಕಡೆ ನೀರಿನ ಸಮಸ್ಯೆಯನ್ನು ಬಗೆಹರಿಸಲಾಗುತ್ತಿದೆ. ಮನಪ ಮೂಲಕ ಆರು ಟ್ಯಾಂಕರ್ ಗಳ ಮೂಲಕ ನೀರು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.