ಮಂಗಳೂರು, ಮಾ 11 (DajiworldNews/AK): ಪವಿತ್ರ ರಂಜಾನ್ ಪ್ರಥಮ ಚಂದ್ರದರ್ಶನವು ಸೋಮವಾರ ಆಗಿರುವುದರಿಂದ ಮಂಗಳವಾರದಿಂದ ರಂಜಾನ್ ಉಪವಾಸ ಆಚರಿಸಲು ದ.ಕ.ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅವರ ಪರವಾಗಿಮಂಗಳೂರು ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ ಹಾಗೂ ಈದ್ಗಾ ಮಸೀದಿಯ ಕೋಶಾಧಿಕಾರಿ ಎಸ್.ಎಂ. ರಶೀದ್ ಹಾಜಿ ತಿಳಿಸಿದ್ದಾರೆ.
ಪವಿತ್ರವಾದ ರಂಜಾನ್ ಮಾಸವನ್ನು ಆಚರಿಸಲು ಈ ಪ್ರದೇಶದ ಮುಸ್ಲಿಮರು ಮಂಗಳವಾರದಿಂದ ಒಂದು ತಿಂಗಳ ಉಪವಾಸದ ಪ್ರಯಾಣವನ್ನು ಪ್ರಾರಂಭಿಸುತ್ತಾರೆ.