ಮಂಗಳೂರು,ಮಾ 11 (DajiworldNews/AK): ಉತ್ತರ ಮಂಡಲದ ಬಿಜೆಪಿ ಯುವ ಮೋರ್ಚ ಕಾರ್ಯದರ್ಶಿಯಾಗಿ ಶ್ರೀಯುತ ಪ್ರಮೋದ್ ಕರ್ಕೇರ ನೇಮಕಗೊಂಡಿದ್ದಾರೆ.
ಯುವ ನಾಯಕನಾಗಿ ಪಕ್ಷ ಸಂಘಟನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ ಸಾಮಾನ್ಯ ಕಾರ್ಯಕರ್ತ ಪ್ರಮೋದ್ ಕರ್ಕೇರಾ ಅವರಿಗೆ ಮಂಗಳೂರು ಉತ್ತರ ಮಂಡಲ ಬಿಜೆಪಿ ಮಣೆ ಹಾಕಿದೆ.
ಯುವ ನಾಯಕ, ಸಂಘಟನಾ ಚತುರ ಪ್ರಮೋದ್ ಕರ್ಕೇರಾ ಶಾಲಾ ದಿನಗಳಲ್ಲೇ ನಾಯಕತ್ವ ಗುಣ ಹೊಂದಿದ್ದು, ಜ್ಞಾನ ಶೀಲ ಏಕತೆ ಎಂಬ ಧ್ಯೇಯ ವಾಕ್ಯವನ್ನು ಹೊಂದಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿದ್ಯಾರ್ಥಿ ಸಂಘಟನೆಯ ಮೂಲಕ ತನ್ನನ್ನು ತಾನು ತೊಡಗಿಸಿಕೊಂಡಿದ್ದರು.
ಎಬಿವಿಪಿಯಲ್ಲಿ ತನಕೆ ಸಿಕ್ಕಂತಹ ಎಲ್ಲಾ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ಪೂರೈಸಿ, ನಾಯಕತ್ವ ಗುಣಮೂಲಕ ಎಲ್ಲರ ಮೆಚ್ಚುಗೆಗೂ ಪಾತ್ರರಾಗಿದ್ದರು. ಗುರುಗಳಾದ ರಮೇಶ್ ಕೆ. ಅವರ ಮಾರ್ಗದರ್ಶನದ ಮುಖೇನ ಸಂಘಟನೆ ಸೇರಿದ ಪ್ರಮೋದ್ ಕರ್ಕೇರಾ ಸಂಘಟನೆಯನ್ನು ಬಲಿಷ್ಠಗೊಳಿಸುವಲ್ಲೂ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದಾರೆ.
ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆ ನೀಡಿರುವ ಇವರು ಹಲವಾರು ಕಾರ್ಯಕ್ರಮಗಳಿಗೆ ಹೆಗಲು ಕೊಟ್ಟು ಜನರ ಮೆಚ್ಚುಗೆ ಗಳಿಸಿದ್ದಾರೆ. ಅಲ್ಲದೆ, ತುಳುನಾಡಿನ ಸಾಂಪ್ರದಾಯಿಕ ಕಲೆಯಾದ ಮಂಗಳೂರಿನ ಜನ ಮನ್ನಣೆ ಪಡೆದಿರುವ ಕಾರ್ಯಕ್ರಮಗಳಲ್ಲಿ ಒಂದಾಗಿರುವ "ಪಿಲಿ ಅಜನೆ" ಎಂಬ ವಿನೂತನ ಕಾರ್ಯಕ್ರಮದ ಮೂಲಕ ತುಳುನಾಡಿನ ಸಂಪ್ರದಾಯದ ಉಳಿವಿಗೂ ತನ್ನ ಸೇವೆ ಸಲ್ಲಿಸುತ್ತಿದ್ದಾರೆ. ಎಲ್ಲರೊಂದಿಗೂ ಸಮಾನವಾಗಿ ಬೆರೆತು ನಡೆಯುವ ಸರಳ ವ್ಯಕ್ತಿತ್ವ ಇವರದ್ದು.