ಬೆಳ್ತಂಗಡಿ, ಮಾ 11(DaijiworldNews/MS): ಹಿರಿಯ ಸಾಹಿತಿ, ಎಸ್.ಡಿ.ಎಂ. ಕಾಲೇಜಿನ ನಿವೃತ್ತ ಹಿಂದಿ ಉಪನ್ಯಾಸಕ, ಪತ್ರಕರ್ತ ಪ್ರೊ.ನಾ ವುಜಿರೆ (ನಾಗರಾಜ ಪೂವಣಿ) (87) ಸೋಮವಾರ ಅಲ್ಪಕಾಲದ ಅನಾರೋಗ್ಯದಿಂದ ಉಜಿರೆಯ ಸ್ವಗೃಹದಲ್ಲಿ ಮಾ.11 ರ ಸೋಮವಾರ ಬೆಳಗ್ಗೆ ನಿಧನ ಹೊಂದಿದರು.
ನಾ.ವುಜಿರೆ ಎಂದೇ ಜನಪ್ರಿಯರಾಗಿದ್ದ ಅವರು, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಜೀವನ ನಡೆಸುತ್ತಿದ್ದರು. ಅವರ ಪತ್ನಿ ಸರಸ್ವತಿ ಎನ್. ರಾಜ್ ಮತ್ತು ಒಬ್ಬ ಮಗ ಪಾರ್ಶ್ವನಾಥ್ (ಅಮೇರಿಕಾದಲ್ಲಿ ಇಂಜಿನಿಯರ್) ರನ್ನು ಸೇರಿ ಅಪಾರ ಕುಟುಂಬ ವರ್ಗವನ್ನು ಅಗಲಿದ್ದಾರೆ. ಪುತ್ರ ವಿದೇಶದಿಂದ ಆಗಮಿಸಿದ ಬಳಿಕ ಅಂತ್ಯಕ್ರಿಯೆ ನಡೆಯಲಿದೆ.