ಬೆಳ್ತಂಗಡಿ, ಮಾ 11(DaijiworldNews/MS): ಶಿವರಾತ್ರಿ ಹೆಸರಿನಲ್ಲಿ ಯುವಕರ ತಂಡವೊಂದು ಸಾರ್ವಜನಿಕ ರಸ್ತೆಯಲ್ಲಿ ಗಾಜು ಪುಡಿ ಮಾಡಿ ಪುಂಡಾಟಿಕೆ ಮೆರೆದಿದ್ದು, ಅದನ್ನು ಪ್ರಶ್ನಿಸಿದ ಪೊಲೀಸರ ಮೇಲೆಯೇ ಕೈ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣದಲ್ಲಿ ಐವರನ್ನು ವೇಣೂರು ಪೊಲೀಸರು ಬಂಧಿಸಿದ್ದು, ನ್ಯಾಯಾಲಯ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಶಿವರಾತ್ರಿ ಹೆಸರಿನಲ್ಲಿ ಯುವಕರ ತಂಡವೊಂದು ಸಾರ್ವಜನಿಕ ರಸ್ತೆಯಲ್ಲಿ ಗಾಜು ಪುಡಿ ಮಾಡಿ ಪುಂಡಾಟಿಕೆ ಮೆರೆದಿದ್ದು, ಅದನ್ನು ತಡೆದ ಪೊಲೀಸರ ಮೇಲೆಯೇ ಕೈ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣದಲ್ಲಿ ಐವರನ್ನು ವೇಣೂರು ಪೊಲೀಸರು ಬಂಧಿಸಿದ್ದು, ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸ್ಥಳೀಯರಾದ ಮಹೇಶ್ (28), ಸುರೇಶ್ (33), ಗೌತಂ (21), ಅರುಣ್ (29) ಹಾಗೂ ಸುರೇಶ್ (28) ಬಂಧಿತರು.
ಶಿವರಾತ್ರಿಯಂದು ಮಧ್ಯರಾತ್ರಿ ಎಎಸ್ಐ ರಾಮಯ್ಯ ಅವರು ಸಿಬಂದಿ ಶಾಂತ ಕುಮಾರ್ ಜತೆ ಇಲಾಖಾ ವಾಹನ ದಲ್ಲಿ ಕರ್ತವ್ಯದಲ್ಲಿದ್ದಾಗ ಕಾಪಿನಡ್ಕದಲ್ಲಿ ಯುವಕರು ದಾಂಧಲೆ ನಡೆಸು ತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ರಸ್ತೆಯಲ್ಲಿ ಕಿಡಿಗೇಡಿ ಗಳು ಸೋಡಾ ಬಾಟಲಿಯನ್ನು ಪುಡಿ ಮಾಡಿದ್ದರು. ಸ್ಥಳಕ್ಕೆ ತೆರಳಿದ ಪೊಲೀಸರು ಅದನ್ನು ತೆರವುಗೊಳಿಸಿ ಬಳಿಕ ಗುಂಡೇರಿ ಕಡೆಗೆ ತೆರಳುತ್ತಿದ್ದಾಗ ಅಲ್ಲೂ ಕೂಡ ಇಂಥದ್ದೇ ಘಟನೆ ಮರು ಕಳಿ ಸಿತ್ತು. ಅಲ್ಲಿ ಏಳೆಂಟು ಮಂದಿ ಯುವಕರು ನಿಂತುಕೊಂಡಿದ್ದು, ಅವರನ್ನು ಎಎಸ್ಐ ಪ್ರಶ್ನಿಸಿದ್ದರು. ಆಗ ಆರೋಪಿ ಗಳು ಪೊಲೀಸ್ ಅಧಿಕಾರಿಗೆ ನಿಂದಿಸಿ, ಹಲ್ಲೆ ನಡೆಸಿ ದ್ದಲ್ಲದೆ ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ ಎಂದು ಆರೋಪಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಇನ್ನೂ 6-7 ಆರೋಪಿಗಳು ತಲೆ ಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಎಸ್ಐ ರಾಮಯ್ಯ ಅವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಅವರು ನೀಡಿದ ದೂರಿನಂತೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು.