ಉಡುಪಿ , ಮಾ 10(DaijiworldNews/Ak):ಅಧಿವಕ್ತಾ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಉಡುಪಿ ಜಿಲ್ಲಾ ಅಧ್ಯಕ್ಷರಾಗಿ ಸಂತೋಷ್ ಹೆಬ್ಬಾರ್ ಮತ್ತು ಕಾರ್ಯದರ್ಶಿಯಾಗಿ ಆರೂರು ಸುಕೇಶ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ಅಧಿವಕ್ತಾ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಬೈಠಕ್ ಉಡುಪಿಯ ಅರ್ ಎಸ್ ಎಸ್ ಕಾರ್ಯಾಲಯದಲ್ಲಿ ನಡೆಯಿತು. ಉಡುಪಿ ಜಿಲ್ಲಾ ಅಧ್ಯಕ್ಷರಾಗಿ ಸಂತೋಷ್ ಹೆಬ್ಬಾರ್, ಕಾರ್ಯದರ್ಶಿಯಾಗಿ ಆರೂರು ಸುಕೇಶ್ ಶೆಟ್ಟಿ ಯವರನ್ನು ಆಯಾಮಗಳ ಪ್ರಮುಖರಾದ ಪ್ರಶಾಂತ್ ಪವರ್ ರವರು ರಾಷ್ಟ್ರೀಯ ಉಪಾಧ್ಯಕ್ಷರಾದ ರಾಜೇಂದ್ರನ್ ಜಿ, ಮಧ್ಯ ಕ್ಷೇತ್ರೀಯ ಸೈಯೋಜಕರಾದ ಲಕ್ಷ್ಮಿ ನಾರಾಯಣ ಹೆಗ್ಡೆ , ರಾಜ್ಯ ಕಾರ್ಯಾಧ್ಯಕ್ಷರಾದ ಗುರುಪ್ರಸಾದ್ ಶೆಟ್ಟಿ, ಪ್ರಾಂತ ಕಾರ್ಯದರ್ಶಿಯಾದ ಜಗದೀಶ್ ಕೆ ಅರ್ ಇವರ ಉಪಸ್ಥಿತಿಯಲ್ಲಿ ಘೋಷಿಸಲಾಯಿತು.