ಕಾಸರಗೋಡುಏ29(DaijiworldNews/AZM): ಶ್ರೀಲಂಕಾ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೂ ಕಾಸರಗೋಡಿನಲ್ಲಿ ಬಂಧಿತರಾದ ಇಬ್ಬರು ಶಂಕಿತ ಯುವಕರಿಗೆ ಯಾವುದೇ ನಂಟು ಇಲ್ಲ ಎಂದು ರಾಷ್ಟ್ರೀಯ ತನಿಖಾ ದಳ(ಎನ್ ಐಎ) ಇಂದು ಸ್ಪಷ್ಟಪಡಿಸಿದೆ.
ಎನ್ಐಎ ತನಿಖಾ ದಳ ಇಂದು ಶಂಕಿತ ಇಬ್ಬರಿಂದ ಮಾಹಿತಿ ಕಲೆ ಹಾಕಿದ್ದು, ಶ್ರೀಲಂಕ ಸ್ಫೋಟದಲ್ಲಿ ಅವರು ಯಾವುದೇ ರೀತಿಯ ಪಾತ್ರ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದೆ. ಶ್ರೀಲಂಕಾ ಸ್ಫೋಟದ ಆರೋಪಿ ಸಹರಾನ್ ಹಾಶಿಂ ಜತೆ ಕಾಸರಗೋಡಿನ ಇಬ್ಬರು ನಿಕಟ ಸಂಪರ್ಕ ಹೊಂದಿರುವ ಬಗ್ಗೆ ಎನ್ಐಎ ಶಂಕೆ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಶಂಕಿತ ಇಬ್ಬರನ್ನೂ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿತ್ತು. ಹಾಗೂ ಸ್ಥಳೀಯ ಪೊಲೀಸರಿಗೂ ತಿಳಿಸದೆ ಭಾನುವಾರ ಗುಪ್ತವಾಗಿ ಕೊಚ್ಚಿಯಿಂದ ಆಗಮಿಸಿದ ತನಿಖಾ ತಂಡ ನಗರ ಹೊರವಲಯದ ವಿದ್ಯಾ ನಗರ ಮತ್ತು ಕೂಡ್ಲು ಸಮೀಪದ ಮನೆಗೆ ದಾಳಿ ನಡೆಸಿ ಮೊಬೈಲ್ ಫೋನ್ ಮತ್ತು ಕೆಲ ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲಿಸಿದೆ. ಪಾಲಕ್ಕಾಡ್ ನಲ್ಲಿ ಒಬ್ಬನನ್ನು ಬಂಧಿಸಲಗಿತ್ತು.