ಉಳ್ಳಾಲ, ಮಾ 10(DaijiworldNews/AA): ಹೆತ್ತ ತಾಯಿನ ಎಂದಾದರೂ ಬಿಟ್ಟು ಕೊಡಕಾಗುತ್ತಾ? ಮೊನ್ನೆವರೆಗೂ ಸುಮಲತಾ ಅಮ್ಮನ ಜೊತೆಗಿದ್ದೆ. ಈಗ ಅವರ ಕೈ ಬಿಟ್ರೆ ಆಗುತ್ತಾ ಎಂದು ನಟ ದರ್ಶನ್ ಪ್ರಶ್ನಿಸಿದ್ದಾರೆ.
ನಟ ದರ್ಶನ್ ಸಹಿತ ಹಲವು ನಟರು ಉಳ್ಳಾಲದ ಕುತ್ತಾರು ದೆಕ್ಕಾಡುವಿನ ಕೊರಗಜ್ಜ ಆದಿಸ್ಥಳಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಸಂಸದೆ ಸುಮಲತಾ ಪರ ನಟ ದರ್ಶನ್ ಪ್ರಚಾರ ವಿಚಾರದ ಬಗ್ಗೆ ಮಾತನಾಡಿದ ನಟ ದರ್ಶನ್ ನಿಮ್ಮ ಮನೇಲಿ ನಿಮ್ಮ ತಾಯಿನ ಬಿಟ್ ಬಿಡ್ತೀರಾ? ಸುಮಲತಾ ಅಮ್ಮ ಅಮ್ಮನೇ ಎಂದು ಅವರು ಹೇಳಿದ್ದಾರೆ.
ಇನ್ನು ಮಂಗಳೂರಿಗೆ ತುಂಬಾ ಸಲ ಬಂದಿದ್ದೆ. ಆದರೆ ಕುತ್ತಾರಿಗೆ ಬರೋದಕ್ಕೆ ಆಗ್ಲಿಲ್ಲ. ಈ ಕ್ಷೇತ್ರದ ಬಗ್ಗೆ ಎಲ್ಲರೂ ಹೇಳುತ್ತಾ ಇದ್ರು. ಹಾಗಾಗಿ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದೇನೆ. ನಾನು ಭೇಟಿ ನೀಡಿದಕ್ಕೆ ಯಾವುದೇ ಕಾರಣ ಇಲ್ಲ ಎಂದರು.
ಈ ವೇಳೆ ಹಾಸ್ಯ ನಟ ಚಿಕ್ಕಣ್ಣ, ಪ್ರಶಾಂತ್ ಮಾರ್ಲ, ಮಹಾಬಲ ಶೆಟ್ಟಿ , ವಿದ್ಯಾಚರಣ್ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ಪ್ರೀತಮ್ ಶೆಟ್ಟಿ ಹಾಗೂ ಕೊರಗಜ್ಜ ಆದಿಸ್ಥಳ ದೆಕ್ಕಾಡುವಿನ ಟ್ರಸ್ಟಿಗಳು ಉಪಸ್ಥಿತರಿದ್ದರು.