ಕಾಸರಗೋಡು,08 (DaijiworldNews/ AK): ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಹಾಲಿ ಸಂಸದ ರಾಜ್ ಮೋಹನ್ ಉಣ್ಣಿ ತ್ತಾನ್ ರವರನ್ನು ಮತ್ತೆ ಕಣಕ್ಕಿಸಲಾಗಿದೆ.
ಇದರಿಂದ ಮೂರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ನ್ನು ಘೋಷಣೆ ಮಾಡಲಾಗಿದ್ದು, ತ್ರಿಕೋನ ಸ್ಪರ್ಧೆಗೆ ಕಾಸರಗೋಡು ಲೋಕಸಭಾ ಕ್ಷೇತ್ರ ಸಜ್ಜಾಗಿದೆ. ಈ ಬಾರಿ ಚುನಾವಣಾ ದಿನಾಂಕ ಘೋಷಣೆ ಮೊದಲೇ ಅಭ್ಯರ್ಥಿಗಳ ನ್ನು ಘೋಷಿಸಲಾಗಿದೆ.
ಸಿಪಿಐಎಂ ನಿಂದ ಎಂ . ವಿ ಬಾಲಕೃಷ್ಣನ್ ಮಾಸ್ಟರ್ , ಬಿಜೆಪಿಯಿಂದ ಅಶ್ವಿನಿ ಎಂ .ಎಲ್ ರವರನ್ನು ಕಣಕ್ಕಿಳಿಸಲಾಗಿದೆ. ಎರಡೂ ಪಕ್ಷಗಳು ಮೊದಲ ಸುತ್ತಿನ ಪ್ರಚಾರಕ್ಕೆ ದುಮುಕಿದ್ದಾರೆ.ಕಾಂಗ್ರೆಸ್ ಮತ್ತು ಸಿಪಿಐಎಂ ನಡುವೆ ನೇರ ಸ್ಪರ್ಧೆಗೆ ಕಾರಣವಾಗುತ್ತಿರುವ ಕ್ಷೇತ್ರದಲ್ಲಿ ಬಿಜೆಪಿಯೂ ಸಡ್ಡು ನೀಡಲು ಮುಂದಾಗಿದೆ. ೩೫ ವರ್ಷಗಳ ಬಳಿಕ ೨೦೧೯ ರಲ್ಲಿ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು.
ರಾಜ್ ಮೋಹನ್ ಉಣ್ಣಿ ತ್ತಾನ್ 44 ಸಾವಿರ ಮತಗಳ ಅಂತರದಿಂದ ಸಿಪಿಐಎಂ ನ ಕೆ . ಪಿ ಸತೀಶ್ಚಂದ್ರನ್ ವಿರುದ್ಧ ಗೆಲುವು ಸಾಧಿಸಿದ್ದರು.