ಕುಂದಾಪುರ, ಮಾ08 (DaijiworldNews/ AK): ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಪೋಟಕ್ಕೆ ಸಂಬಂಧಿಸಿದಂತೆ ರಾಜ್ಯದ ಇತರ ಎಲ್ಲೆಡೆಗಳಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.
ಉಗ್ರಗಾಮಿಗಳ ಅಟ್ಟಹಾಸಕ್ಕೆ ರಾಮೇಶ್ವರಂ ಕೆಫೆ ಬ್ಲಾಸ್ಟ್ ಆಗಿದ್ದರಿಂದ ರಾಜ್ಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇಂದು ಎಲ್ಲೆಡೆ ಮಹಾಶಿವರಾತ್ರಿಯ ಸಂಭ್ರಮ ಮನೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಯಾವೆಲ್ಲಾ ದೇವಸ್ಥಾನಗಳಲ್ಲಿ ಅತಿ ಹೆಚ್ಚು ಭಕ್ತ ಸಮೂಹ ಸೇರುತ್ತದೆಯೋ ಅಂತಹಾ ಸ್ಥಳಗಳಿಗರ ಪೊಲೀಸ್, ಎಫ್ ಎಸ್ ಎಲ್ ತಂಡ ಮತ್ತು ಶ್ವಾನದಳ ಮೊದಲಾದ ತಂಡಗಳು ಭೇಟಿಕೊಟ್ಟು ತೀವ್ರ ತಪಾಸಣೆ ನಡೆಸಿದ್ದಾರೆ.
ಇಂದು ರಾತ್ರಿಯೂ ಕೂಡ ತಪಾಸಣೆ ಶಿವರಾತ್ರಿಯ ಜಾಗರಣೆ ಮತ್ತು ಭಜನೆ ಅಹೋರಾತ್ರಿ ಭಜನೆ ಇರುವುದರಿಂದ ಜನ ಸಂದಣಿ ಹೆಚ್ಚಿರುವ ಸ್ಥಳಗಳಲ್ಲಿ ಪೊಲೀಸರ ತಂಡ ರಾತ್ರಿಯೂ ಸಹ ತನ್ನ ತಪಾಸಣೆಯನ್ನು ತೀವ್ರಗೊಳಿಸಲಿದ್ದಾರೆ ಎಂದು ತಿಳಿದು ಬಂದಿದೆ.