ಮಂಗಳೂರು, ನ 18: ಪ್ರತಿಷ್ಠಿತ ಗ್ರೇಟ್ ಇಂಡಿಯನ್ ಐಸ್ ಕ್ರೀಂ ಸ್ಪರ್ಧೆಯಲ್ಲಿ ಹಾಂಗ್ಯೋ ಐಸ್ ಕ್ರೀಂ ರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.
ಗುರುಗಾಂವ್ ನಲ್ಲಿ ಡುಪಾಂಟ್ ಮತ್ತು ಇಂಡಿಯನ್ ಡೇರಿ ಅಸೋಸಿಯೇಶನ್ ನೇತೃತ್ವದಲ್ಲಿ ನಡೆದ ಸ್ಪರ್ಧೆಯಲ್ಲಿ ಹಾಂಗ್ಯೋ ಐಸ್ ಕ್ರೀಂ ಅತ್ಯುತ್ತಮ ಗುಣಮಟ್ಟ ಮತ್ತು ರುಚಿಗಾಗಿ ಒಟ್ಟು 6 ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
103 ಸಂಸ್ಥೆಗಳು ಸ್ಪರ್ಧೆಯಲ್ಲಿ ಭಾಗಿಯಾಗಿದ್ದು, 6 ವಿಭಿನ್ನ ವಿಭಾಗಗಳಲ್ಲಿ ಸ್ಪರ್ಧೆ ನಡೆದಿತ್ತು. ಹಾಂಗ್ಯೋ ಐಸ್ ಕ್ರೀಂ ಸ್ಟ್ಯಾಂಡರ್ಡ್ ವೆನಿಲ್ಲಾ ಐಸ್ ಕ್ರೀಂ ಮತ್ತು ಕೂಲ್ ಕಿಡ್ಸ್ ವಿಭಾಗದಲ್ಲಿ ಎರಡು ಚಿನ್ನದ ಪದಕ, ಅತ್ಯುತ್ತಮ ಚಾಕಲೇಟ್ ವರ್ಗದಲ್ಲಿ 3 ಬೆಳ್ಳಿಯ ಪದಕ, ಸ್ಟ್ಯಾಂಡರ್ಡ್ ವೆನಿಲ್ಲಾ ಪ್ರೋಜನ್ ಡೆಸರ್ಟ್ ವಿಭಾಗದಲ್ಲಿ ಕಂಚಿನ ಪ್ರಸಸ್ತಿ ತನ್ನದಾಗಿಸಿಕೊಂಡಿದೆ.
ನಿರಂತರ 15 ವರುಷಗಳಿಂದ ಕಠಿಣ ಶ್ರಮವಹಿಸಿ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಹಾಂಗ್ಯೋ ಐಸ್ ಕ್ರೀಂ, ಎಲ್ಲರಿಗೂ ಇಷ್ಟವಾಗುವ ಉತ್ಪನ್ನವನ್ನು ನೀಡುತ್ತಿದ್ದು, ಗುಣಮಟ್ಟದ ಐಸ್ ಕ್ರೀಂ ಅನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.