ಬಂಟ್ವಾಳ ಮಾ 07 (DaijiworldNews/AK): ಕಾರಿನಲ್ಲಿ ಬಂದ ಮಾಣಿ ಗ್ರಾಮ ಪಂಚಾಯತ್ ಸದಸ್ಯ ಮೆಲ್ವಿನ್ ಕಿಶೋರ್ ಮಾರ್ಟಿಸ್ ಹಾಗೂ ಪತ್ನಿ ಶಾಂತಿ ಮಾರ್ಟಿಸ್ ದಂಪತಿ ಬೈಕ್ನಲ್ಲಿ ಕಚೇರಿಗೆ ತೆರಳುತ್ತಿದ್ದ ವೇಳೆ ವ್ಯಕ್ತಿಯ ಕುತ್ತಿಗೆಯಲ್ಲಿದ್ದ 5 ಪವನ್ ಚಿನ್ನದ ಸರ, ಪರ್ಸ್ ನಲ್ಲಿದ್ದ ಹಣವನ್ನು ದರೋಡೆ ಗೈದು ಅವ್ಯಾಚವಾಗಿ ಬೈದು ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ ಘಟನೆ ಬಂಟ್ವಾಳ ತಾಲೂಕಿನ ಮಾಣಿ ಜಂಕ್ಷನ್ನಲ್ಲಿ ನಡೆದಿದೆ.
ಮಾಣಿ ಗ್ರಾಮದ ಲಕ್ಕಪ್ಪರ ಕೋಡಿ ನಿವಾಸಿ ಸ್ಟೀಫನ್ ಅಲ್ವಿನ್ ಪೈಸ್ ಎಂಬವರು ಮಾರ್ಚ್ 5 ರಂದು ತಮ್ಮ ಕಚೇರಿಗೆ ತೆರಳುತ್ತಿದ್ದಾಗ ಕಾರಿನಲ್ಲಿ ಬಂದ ಆರೋಪಿಗಳು ಆತನನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ ಬೆಲೆಬಾಳುವ ವಸ್ತುಗಳನ್ನು ದೋಚಿ ಕೊಲೆ ಬೆದರಿಕೆ ಹಾಕಿದ್ದರು.
2 ಲಕ್ಷಕ್ಕೂ ಅಧಿಕ ಮೌಲ್ಯದ ಐದು ಪವನ್ ತೂಕದ ಚಿನ್ನದ ಸರ ದೋಚಲಾಗಿದ್ದು, ಕತ್ತಿನಲ್ಲಿದ್ದ ಪರ್ಸ್ ನಲ್ಲಿ 18 ಸಾವಿರ ನಗದು ಹಣವಿತ್ತು. ದರೋಡೆ ಕೃತ್ಯದಲ್ಲಿ ತೊಡಗಿದ್ದ ಆರೋಪಿಗಳು ಪರಾರಿಯಾಗಿದ್ದಾರೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ನೋಂದಣಿ ಸಂಖ್ಯೆ 34/2024 ಕಲಂ 341, 355, 323, 504, 506, 392 ಆರ್/ಡಬ್ಲ್ಯು 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.