ಕಾರ್ಕಳ, ಮಾ 06(DaijiworldNews/SK): ಉಡುಪಿ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರುಗಿದ್ದ ಮಲೆಕುಡಿಯ ಸಮುದಾಯದ ಕುಂದು- ಕೊರತೆ ಸಭೆಯಲ್ಲಿ ಪ್ರಸ್ತಾಪಿಸಿದ ವಿಚಾರವೊಂದಕ್ಕೆ ಜಿಲ್ಲಾಡಳಿತದಿಂದ ಸಕರಾತ್ಮವಾಗಿ ಸ್ಪಂದನೆ ಸಿಕ್ಕಿದೆ.
ಹೆಬ್ರಿ ತಾಲೂಕಿನ ಕಬ್ಬಿನಾಲೆ ಗ್ರಾಮದ ವೃದ್ಧರಾಗಿರುವ ಮೀನಾಕ್ಷಿ ಅವರಲ್ಲಿ ಯಾವುದೇ ಬ್ಯಾಂಕ್ ಖಾತೆ ಇಲ್ಲದ ಕಾರಣ ಸರ್ಕಾರಿ ಸೌಲಭ್ಯಗಳು ಸಿಗದೇ ವಂಚಿತರಾಗಿದ್ದರು. ಈ ವಿಚಾರವು ಕುಂದು ಕೊರತೆ ಸಭೆಯಲ್ಲಿ ಪ್ರಸ್ತಾಪವಾಗಿತ್ತು.
ಉಡುಪಿ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ,ಉಡುಪಿ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪಿ.ಎಮ್ ಪಿಂಜಾರ್ ಅವರು ಸ್ಪಂದಿಸಿದ್ದರು.
ಇಂದು ಯೂನಿಯನ್ ಬ್ಯಾಂಕ್ ಮುದ್ರಾಡಿ ಇದರ ವ್ಯವಸ್ಥಾಪಕ ಆನಂದ್ ಕುಮಾರ್ ಬಕರೆ ಇವರು ಸುಮಾರು 03 ಕಿಲೋ ಮೀಟರ್ ಕಾಡಿನ ಮಧ್ಯೆ ನಡೆದುಕೊಂಡು ಮೀನಾಕ್ಷಿ ಅವರ ಮನೆಗೆ ಹೋಗಿ ಬ್ಯಾಂಕಿನ ಖಾತೆಯನ್ನು ತೆರೆಯಲು ಅಗತ್ಯ ಕ್ರಮಕೈಗೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷ ಗಂಗಾಧರ ಗೌಡ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷ ಗಂಗಾಧರ ಗೌಡ ಉಪಸ್ಥಿತರಿದ್ದರು.