ಮಂಗಳೂರು, ಮಾ 06(DaijiworldNews/AK): ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾಯೋಜನೆ ಹಾಗೂ ಕೇಂದ್ರ ಸರ್ಕಾರದ ವಾರ್ತಾ ಸಚಿವಾಲಯ, ರಾಷ್ಟ್ರೀಯ ಸೇವಾಯೋಜನೆ ಪ್ರಾಂತೀಯ ನಿರ್ದೇಶನಾಲಯ ಸಹಕಾರದೊಂದಿಗೆ ನನ್ನ ಮೊದಲ ಮತ ದೇಶಕ್ಕಾಗಿ, ನನ್ನ ಮೊದಲ ಮತ ಉನ್ನತಿಗಾಗಿ ಕಾರ್ಯಕ್ರಮವು ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜನಾಧಿಕಾರಿ ಕಚೇರಿಯ ಆವರಣದಲ್ಲಿ ಮಾ.6ರ ಬುಧವಾರ ಜರುಗಿತು.
ಮುಖ್ಯ ಅತಿಥಿಯಾಗಿ ಸಿಸಿಬಿ ಎಸಿಪಿ ಗೀತಾ ಕುಲಕರ್ಣಿ ಆಗಮಿಸಿ ಪ್ರತಿಜ್ಞಾ ವಿಧಿ ಭೋದಿಸಿದರು. ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾಯೋಜನೆಯ ಸಂಯೋಜನಾಧಿಕಾರಿ ಡಾ. ನಾಗರತ್ನ ಕೆ.ಎ ಉಪಸ್ಥಿತರಿದ್ದರು.