ಕಾಸರಗೋಡು, ಏ 29 (Daijiworld News/MSP): ಕಾಸರಗೋಡು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸೇರಿದ ದಕ್ಷಿಣ ಭಾಗದ ಹಲವಾರು ಮತಗಟ್ಟೆಯಲ್ಲಿ ಸಿಪಿಎಂನಿಂದ ನಕಲಿ ಮತದಾನ ಮಾಡಲಾಗಿದೆ ಎಂಬ ಕಾಂಗ್ರೆಸ್ ಆರೋಪದ ಹಿನ್ನಲೆಯಲ್ಲಿ ರಾಜ್ಯ ಚುನಾವಣಾಧಿಕಾರಿ ಟಿಕರಾಂ ಮೀನಾ ಅವರು ಕಣ್ಣೂರು ಮತ್ತು ಕಾಸರಗೋಡು ಜಿಲ್ಲಾಧಿಕಾರಿಯವರಿಂದ ವರದಿ ತರಿಸಿಕೊಂಡಿದ್ದಾರೆ.
ವರದಿ ಪರಿಶೀಲಿಸಿ ಕೇಂದ್ರ ಚುನಾವಣಾ ಆಯೋಗಕ್ಕೆ ಕಳುಹಿಸಲಿರುವ ರಾಜ್ಯ ಚುನಾವಣಾಧಿಕಾರಿ ವಿಡಿಯೋ ದೃಶ್ಯಗಳ ಸಹಿತ ವರದಿ ಸಲ್ಲಿಕೆ ಮಾಡಲಿದ್ದಾರೆ.
ಪ್ರಾಥಮಿಕ ತನಿಖೆಯಿಂದ ನಕಲಿ ಮತದಾನವಾಗಿರುವ ಬಗ್ಗೆ ತಿಳಿದುಬಂದಿದ್ದು, ಕಾಸರಗೋಡು ಲೋಕಸಭಾ ಕ್ಷೇತ್ರದ ಕಣ್ಣೂರು ಜಿಲ್ಲೆಗೆ ಒಳಪಟ್ಟ ಕಲ್ಯಾಶ್ಯೇರಿ , ಪಯ್ಯನ್ನೂರು , ತ್ರಿಕ್ಕರಿಪುರ ವಿಧಾನಸಭಾ ಕ್ಷೇತ್ರದ ಕೆಲ ಮತಗಟ್ಟೆಗಳಲ್ಲಿ ನಕಲಿ ಮತದಾನ - ಈ ಬಗ್ಗೆ ಕಾಂಗ್ರೆಸ್ ವಿಡಿಯೋ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿತ್ತು . ಮಾತ್ರವಲ್ಲ ಚುನಾವಾಣಾ ಆಯೋಗಕ್ಕೂ ದೂರು ನೀಡಿತ್ತು.
ಕಣ್ಣೂರು ಜಿಲ್ಲೆಯ ೧೮೫೭ ಮತಗಟ್ಟೆಯಲ್ಲಿ ೧೬ ಮತಗಟ್ಟೆಗಳ ಹೊರತಾಗಿ ಉಳಿದೆಲ್ಲಾ ಮತಗಟ್ಟೆಗಳಲ್ಲಿ ವೆನ್ ಕಾಸ್ಟಿಂಗ್ ಏರ್ಪಡಿಸಲಾಗಿತ್ತು. ಆದರೆ ಈ ಮತಗಟ್ಟೆಗಳಲ್ಲಿ ಕಳ್ಳ ಮತದಾನ ನಡೆದಿಲ್ಲ ಬದಲಾಗಿ ತೀರಾ ದೈಹಿಕ ಶಕ್ತಿ ಇಲ್ಲದ ಮತದಾರರ ಓಪನ್ ವೋಟ್ ಮಾಡಲಾಗಿದೆ ಎಂದು ಸಿಪಿಎಂ ನಾಯಕರು ಸ್ಪಷ್ಟೀಕರಣ ನೀಡಿದ್ದರು.