ಉಳ್ಳಾಲ, ಮಾ 04(Daijiworld/Ak): ಯೆನೆಪೋಯ ಮೆಡಿಕಲ್ ಕಾಲೇಜಿನ ರಜತ ಮಹೋತ್ಸವದ ಲಾಂಛನವನ್ನು ದೇರಳಕಟ್ಟೆಯ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಸೋಮವಾರ ಯೆನೆಪೊಯ ಪರಿಗಣಿತ ವಿಶ್ವ ವಿದ್ಯಾನಿಲಯದ ಕುಲಪತಿ ಡಾ.ವೈ.ಅಬ್ದುಲ್ಲ ಕುಂಞಿ ಅನಾವರಣ ಗೊಳಿಸಿದರು.
ಬಳಿಕ ಮಾತನಾಡಿದ ಅವರು,ಯೆನೆಪೋಯ ಮೆಡಿಕಲ್ ಕಾಲೇಜು 1999 ರಲ್ಲಿ ಸ್ಥಾಪನೆಯಾಗಿದೆ.ಇದೀಗ 2024 ರಲ್ಲಿ ತನ್ನ ರಜತ ಮಹೋತ್ಸವ ವರ್ಷಾಚರಣೆ ನಡೆಸಲಿದೆ.ಮಂಗಳೂರಿನ ದೇರಳಕಟ್ಟೆಯ ಯೆನೆಪೊಯ ಪರಿಗಣಿತವ ವಿಶ್ವವಿದ್ಯಾ ಲಯದ ಘಟಕ ಸಂಸ್ಥೆಗಳಲ್ಲಿ ಒಂದಾದ ಯೆನೆಪೊಯ ವೈದ್ಯಕೀಯ ಕಾಲೇಜು ತನ್ನ ಇಪ್ಪತ್ತೈದನೇ ವರ್ಷದ ಸಂದರ್ಭದಲ್ಲಿ ಬೆಳ್ಳಿಹಬ್ಬದ ಆಚರಣೆಯನ್ನು ಪ್ರಾರಂಭಿಸಲು ಸಂಸ್ಥೆ ವಿವಿಧ ಪಾಲುದಾ ರರಿಗಾಗಿ ಕಾರ್ಯಕ್ರಮಗಳನ್ನು ಆಯೋಜಿಸಿದೆ.
ಬೆಳ್ಳಿ ಹಬ್ಬದ ಕಾರ್ಯಕ್ರಮ ಗಳು ಯಶಸ್ವಿಯಾಗಲಿ ಎಂದು ಡಾ. ವೈ.ಅಬ್ದುಲ್ಲಾ ಕುಂಞ ಶುಭ ಹಾರೈಸಿದರು.
ಯೆನೆಪೊಯ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಎಸ್ ಮೂಸಬ್ಬ,ಸ್ವಾಗತಿಸಿ ಮಾತನಾಡುತ್ತಾ, ಯೆನೆಪೊಯ ವೈದ್ಯಕೀಯ ಕಾಲೇಜು ತನ್ನ ಇಪ್ಪತ್ತೈದನೇ ವರ್ಷದ ಸಂದರ್ಭದಲ್ಲಿ ಬೆಳ್ಳಿಹಬ್ಬದ ಆಚರಣೆಯ ಅಂಗವಾಗಿ ಮಾರ್ಚ್ 2024 ರಿಂದ,ಶಾಲಾ ಶಿಕ್ಷಕರಿಗೆ ಆರೋಗ್ಯ ಸಮಾಲೋಚನೆ,ವೈದ್ಯಕೀಯ ಪ್ರದರ್ಶನ ಮತ್ತು ಪ್ರಥಮ ಚಿಕಿತ್ಸಾ ತರಬೇತಿ, ಮ್ಯಾರಥಾನ್, ಗೋ ಗ್ರೀನ್ ಅಭಿಯಾನ, ಶಾಲಾ ಮಟ್ಟದ ಸ್ಪರ್ಧೆಗಳು, ಅತ್ಯುತ್ತಮ ಎನ್ಜಿಒ ಪ್ರಶಸ್ತಿ, ಎಚ್ಪಿವಿ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ, ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಮತ್ತು ಹಳೆಯ ವಿದ್ಯಾರ್ಥಿಗಳ ದಿನಾಚರಣೆಯನ್ನು ನಡೆಸಲು ರಜತ ಮಹೋತ್ಸವ ಸಂಘಟನಾ ಸಮಿತಿಯನ್ನು ರಚಿಸಲಾಗಿದೆ.
ಜುಲೈನಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ವಾರದ ಸಮಾರೋಪ ಕಾರ್ಯಕ್ರಮವನ್ನು ಯೋಜಿಸಲಾಗಿದೆ ಎಂದರು.ಯೆನೆಪೊಯ (ಪರಿಗಣಿತ)ವಿಶ್ವ ವಿದ್ಯಾನಿಲಯದ ಉಪ ಕುಲಪತಿ ಡಾ.ಎಂ. ವಿಜಯ ಕುಮಾರ್ ಮಾತನಾಡುತ್ತಾ,ಯೆನೆಪೊಯ ವೈದ್ಯಕೀಯ ಕಾಲೇಜು 25ವರ್ಷಗಳ ಅನುಭವ ಮುಂದಿನ ವರ್ಷ ಗಳಲ್ಲಿ ಇನ್ನಷ್ಟು ಸಾಧನೆಗಳೊಂದಿಗೆ ಮುನ್ನಡೆಯಲು ಸಹಾಯವಾಗಲಿ. ಯಶಸ್ವಿಯಾಗಿ ಶತಮಾನೋತ್ಸವವನ್ನು ಕಾಣುವಂತಾಗಲಿ ಎಂದು ಶುಭ ಹಾರೈಸಿದರು.
ಯೆನೆಪೊಯ ವೈದ್ಯಕೀಯ ಕಾಲೇಜಿನ ಪೂರ್ವ ಪ್ರಾಂಶುಪಾಲರಾದ ಡಾ.ಗುಕಾಮ್ ಜಿಲಾನಿ ಖಾದ್ರಿಯವರು ಮಾತನಾಡುತ್ತಾ, ಸಂಸ್ಥೆ ಯೆನೆಪೊಯ ಅಬ್ದುಲ್ಲಾ ಕುಂಞಯವರ ಸಮರ್ಥ ನಾಯಕತ್ವದಲ್ಲಿಸಂಘಟಿತ ಪ್ರಯತ್ನ ದ ಫಲವಾಗಿ ಬೆಳ್ಳಿ ಹಬ್ಬವನ್ನು ಕಾಣುವಂತಾಗಿದೆ ಮುಂದೆಯೂ ಯಶಸ್ಸನ್ನು ಸಾಧಿಸಲಿ ಎಂದು ಶುಭ ಹಾರೈಸಿದರು.
ಯೆನೆಪೊಯ ವಿಶ್ವ ವಿದ್ಯಾನಿಲಯದ ಕುಲಸಚಿವ ಡಾ.ಎಂ. ಡಾ.ಗಂಗಾಧರ ಸೋಮಯಾಜಿ,ಡಾ.ಅಖ್ತರ್ ಹುಸೈನ್ ಮೊದಲಾದವರು ಉಪಸ್ಥಿತರಿದ್ದರು. ಯೆನೆಪೊಯ ಮೆಡಿಕಲ್ ಕಾಲೇಜಿನ ಡೀನ್ ಡಾ.ಅಭಯ್ ನೀರ್ಗುಡೆ ವಂದಿಸಿದರು.