ಉಡುಪಿ, ಮಾ 04(DaijiworldNews/AK): ರಾಜಕೀಯ ಚರ್ಚೆ ಚುನಾವಣೆಗೆ ಸ್ಪರ್ಧಿಸಬೇಕೋ ಬೇಡವೋ ಎಂದು ಒಂದು ವಾರದ ಒಳಗೆ ತೀರ್ಮಾನ ಮಾಡುತ್ತೇನೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ನಿಕಟಪೂರ್ವ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹೇಳಿದರು.
ಮಾಧ್ಯಮದೊಂದಿಗೆ ಕಾಂಗ್ರೆಸ್ ಸೇರ್ಪಡೆ ವದಂತಿ ವಿಚಾರ ಮಾತನಾಡಿದ ಅವರು, ಈ ವರೆಗೆ ನಾನು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾಗಿ ಯಾವುದೇ ಪಕ್ಷದ ಸದಸ್ಯನಾಗಿ ಗುರುತಿಸಿಕೊಂಡಿಲ್ಲ ಈಗ ಸರಕಾರಕ್ಕೆ ಜಾತಿಗಣತಿ ಬಗ್ಗೆ ವರದಿ ಸಲ್ಲಿಸಿದ್ದೇನೆ.
ನಾನು ಸದ್ಯಕ್ಕೆ ಯಾವುದೇ ಪಕ್ಷದ ಸದಸ್ಯ ಅಲ್ಲಆಯೋಗದಲ್ಲಿದ್ದಾಗ ನಾನು ಯಾವುದೇ ಪಕ್ಷದ ಸದಸ್ಯನಾಗಿರಲು ಸಾಧ್ಯವಿಲ್ಲ. ನನ್ನ ಕೆಲವೊಂದು ವೈಯುಕ್ತಿಕ ಕೆಲಸಗಳಿದ್ದು ಅದು ಮುಗಿಸಿದ ಬಳಿಕ ರಾಜಕೀಯ ನಡೆಯ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳುವೆ ಎಂದರು.
ಮುಂದಿನ ನಿರ್ಧಾರ ಬಗ್ಗೆ ಕುಟುಂಬ ಸದಸ್ಯರ ಜೊತೆ ಚರ್ಚೆ ಮಾಡುತ್ತೇನೆ.ಸ್ನೇಹಿತರು ಆಪ್ತರ ಜೊತೆ ಮುಂದಿನ ರಾಜಕೀಯದ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಮಾಡುವುದಾಗಿ ಹೇಳಿದರು.
ಬಿಜೆಪಿಯಿಂದ ಅಧಿಕೃತವಾಗಿ ಯಾರೂ ಸಂಪರ್ಕ ಮಾಡಿಲ್ಲ- ಮಾತುಕತೆ ಆಗಿಲ್ಲ. ಆದರೆ ಬಿಜೆಪಿಯ ಕೆಲ ಸ್ನೇಹಿತರು ಕರೆ ಮಾಡಿ ಮಾತನಾಡುತ್ತಿದ್ದಾರೆ ಎಂದರು. ಚುನಾವಣೆಗೆ ಸ್ಪರ್ಧಿಸಬೇಕು ಬೇಡವೋ ಎಂದು ಮೊದಲು ಚರ್ಚೆ ಮಾಡುತ್ತೇನೆ.ಯಾವ ಪಕ್ಷದಿಂದ ಎಂಬುದು ಆಮೇಲೆ ಚರ್ಚೆಗೆ ಬರುತ್ತದೆ.ಒಂದೆರಡು ದಿನ ವೈಯಕ್ತಿಕ ಕೆಲಸಗಳ ಮುಗಿದ ನಂತರ ರಾಜಕೀಯ ಚರ್ಚೆ ಚುನಾವಣೆಗೆ ಸ್ಪರ್ಧಿಸ ಬೇಕೋ ಬೇಡವೋ ಎಂದು ಒಂದು ವಾರದ ಒಳಗೆ ತೀರ್ಮಾನ ಮಾಡುತ್ತೇನೆ ಎಂದು ಹೇಳಿದರು. ಸ್ಪರ್ಧಿಸುವುದಾದರೆ ಯಾವ ಪಕ್ಷದಿಂದ ಎಂಬುದು ಆ ಮೇಲಿನ ಚರ್ಚೆ ಎಂದರು.