ಕಡಬ, ಮಾ 04(DaijiworldNews/SK): ಕಡಬ ಸರ್ಕಾರಿ ಕಾಲೇಜಿನಲ್ಲಿ 3 ವಿದ್ಯಾರ್ಥಿನಿಯರ ಮೇಲೆ ಆಸಿಡ್ ದಾಳಿ ಘಟನೆ ಸಂಬಂಧ ಆರೋಪಿಯನ್ನು ಕಡಬ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣದ ಆರೋಪಿಯನ್ನು ಕೇರಳದ ಮಲಪ್ಪುರಂ ಜಿಲ್ಲೆಯ ನೆಲಂಬೂರು ತಾಲೂಕಿನ ಎಮ್. ಬಿ. ಎ ವಿದ್ಯಾರ್ಥಿ ಅಬಿನ್ (23) ಎಂದು ಗುರುತಿಸಲಾಗಿದೆ.
ಆಸಿಡ್ ಗೆ ತುತ್ತಾದ ವಿದ್ಯಾರ್ಥಿನಿಯರೆಲ್ಲರೂ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದು, ಕಾಲೇಜು ವರಾಂಡದಲ್ಲಿ ಕುಳಿತು ಪರೀಕ್ಷಾಗೆ ತಯಾರಿ ನಡೆಸುತ್ತಿದ್ದರು ಎನ್ನಲಾಗಿದೆ. ಇದೇ ವೇಳೆ ಕಾಲೇಜಿನ ಸಮವಸ್ತ್ರವನ್ನು ಧರಿಸಿ ಅಕ್ರಮವಾಗಿ ಆವರಣ ಪ್ರವೇಶಿದ ಆರೋಪಿಯೂ ವಿದ್ಯಾರ್ಥಿನಿ ಅಲೀನಾ ಸಿಬಿಯನ್ನು ಗುರಿಯಾಗಿಸಿ ಮೊದಲೇ ತನ್ನೊಂದಿಗೆ ತಂದಿದ್ದ ಆಸಿಡ್ ನ್ನು ಎರಚಿಸಿದ್ದಾನೆ. ಇದರ ಪರಿಣಾಮ ವಿದ್ಯಾರ್ಥಿನಿಯ ಜೊತೆಗಿದ್ದ ಇತರ ಇಬ್ಬರು ಸ್ನೇಹಿತೆಯರಿಗೂ ಗಾಯಗಳಾಗಿವೆ.
ಮೇಲ್ನೋಟಕ್ಕೆ ಇದು ಪ್ರೇಮವೈಫಲ್ಯದ ಕೃತ್ಯ ಎಂದು ತಿಳಿದು ಬಂದಿದೆ. ಆರೋಪಿ ಮತ್ತು ಆಸಿಡ್ ದಾಳಿಗೊಳಗಾದ ವಿದ್ಯಾರ್ಥಿನಿ ಒಂದೇ ಕೋಮಿನವರು ಎಂದು ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ದ. ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ಮಾಹಿತಿ ನೀಡಿದ್ದು, "ಯುವಕನ ಮನೆಯ ಸಮೀಪವೇ ವಿದ್ಯಾರ್ಥಿನಿಯ ತಾಯಿ ಮನೆ ಇದ್ದು, ಮೇಲ್ನೋಟಕ್ಕೆ ಇದು ಪ್ರೇಮ ವೈಫಲ್ಯದಿಂದ ಆರೋಪಿ ಕೃತ್ಯವೆಸಗಿದಂತೆ ಕಂಡುಬರುತ್ತಿದೆ.ಆರೋಪಿ ಯುವಕನನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ ಯುವಕನಿಗೆ ಸಹಾಯ ಮಾಡಿದ ಮತ್ತು ಸಮವಸ್ತ್ರ ನೀಡಿದವರ ಬಗ್ಗೆ ಮಾಹಿತಿ ಸಿಗಬೇಕಿದೆ.