ಮಂಗಳೂರು ನ 18: ಖಾಸಗಿ ಆಸ್ಪತ್ರೆಗಳ ವೈದ್ಯರು ಹಾಗೂ ರಾಜ್ಯ ಸರ್ಕಾರದ ನಡುವಿನ ಹಗ್ಗ ಜಗ್ಗಾಟಕ್ಕೆ ತೆರೆ ಬಿದ್ದಿದೆ. ಕರ್ನಾಟಕ ಖಾಸಗಿ ವೈದ್ಯರ ನಿಯಂತ್ರಣ ಮಸೂದೆಯಲ್ಲಿ ಕೆಲವು ಅಂಶಗಳನ್ನು ಕೈಬಿಡಲು ಸರ್ಕಾರ ನಿರ್ಧರಿಸಿದ್ದು, ವೈದ್ಯರು ಪಟ್ಟು ಸಡಿಲಿಸಿದ್ದಾರೆ. ಹೀಗಾಗಿ ಸೋಮವಾರವೇ ಕೆಲವೊಂದು ತಿದ್ದುಪಡಿಗಳೊಂದಿಗೆ ಮಸೂದೆ ಮಂಡನೆಯಾಗಲಿದೆ. ವೈದ್ಯರ ಮುಷ್ಕರಕ್ಕೆ ರಾಜ್ಯಾದ್ಯಂತ 60 ಮಂದಿ ಬಲಿಯಾಗಿದ್ದು ದಕ್ಷಿಣ ಕನ್ನಡದಲ್ಲಿ ಸೂಕ್ತ ಚಿಕಿತ್ಸೆ ದೊರೆಯದೆ ನಾಲ್ವರು ಮೃತಪಟ್ಟಿದ್ದಾರೆ.