ಮಂಗಳೂರು, ಫೆ 27(DaijiworldNews/AK): ಬಿಜೆಪಿ ಮತ್ತು ಆರ್.ಎಸ್.ಎಸ್ ನಂತಹ ಕಿಡ್ನಾಪಿಂಗ್ ಟೀಮ್ ಈ ದೇಶದಲ್ಲಿ ಬೇರೆ ಯಾವುದು ಇಲ್ಲಎಂದು ಮೋದಿ ಸರ್ಕಾರ ವಿರುದ್ಧ ಬಹುಭಾಷಾ ನಟ ಪ್ರಕಾಶ್ ರೈ ವಾಗ್ದಾಳಿ ನಡೆಸಿದ್ದಾರೆ.
ನಗರದ ಹೊರವಲಯದ ತೊಕ್ಕೋಟ್ಟಿನಲ್ಲಿ ಡಿ ವೈ ಎಫ್ ಐ 12 ನೇ ರಾಜ್ಯ ಸಮ್ಮೇಳದಲ್ಲಿ ಬಹಿರಂಗ ಸಭೆ ಆಯೋಜಿಸಲಾಯಿತು.ಸಭೆಯಲ್ಲಿ ಬಹುಭಾಷಾ ನಟ ಪ್ರಕಾಶ್ ರೈ ಮಾತನಾಡಿ, ಪ್ರಧಾನಿ ಮೋದಿ ಅವರನ್ನು ಪರೋಕ್ಷವಾಗಿ ಟೀಕಿಸಿದರು. ಸ್ವಾತಂತ್ರ್ಯ ಬಂದು ಏಳು ದಶಕಗಳು ಆಗಿದೆ.ಹಿಂದೆ ಸ್ವಾತಂತ್ರಕ್ಕಾಗಿ ಉಪವಾಸ ಮಾಡಿದ ನಾಯಕರಿದ್ದರುಆದರೆ ಈಗ ದೇವಾಸ್ಥಾನದ ಉದ್ಘಾಟನೆಗಾಗಿ ಉಪವಾಸ ಮಾಡುವ ನಾಯಕರು ಇದ್ದಾರೆ ಎಂದು ಪ್ರಧಾನಿ ಮೋದಿಯನ್ನು ಬಹುಭಾಷಾ ನಟ ಪ್ರಕಾಶ್ ರೈ ಟೀಕಿಸಿದ್ದಾರೆ.
ಮಾತೆತ್ತಿದ್ರೆ ರಾಮಮಂದಿರ, ಮಸೀದಿ, ಹಿಂದೂ ಧರ್ಮ ಅಂತಾರೆ. ಎಷ್ಟು ಅಂತಾ ಹೋಗ್ತೀರಾ.ಮುಂದೆ ಹರಪ್ಪ, ಮೊಹೆಂಜಾದೂರು ಸಿಗಬಹುದು.ಹಾಗಾದ್ರೆ ಮತ್ತೆ ಶಿಲಾಯುಗಕ್ಕೆ ಹೋಗ್ತೀರಾ ಎಂದು ಪ್ರಶ್ನಿಸಿದ ಅವರುಪೆಟ್ರೋಲ್ ಮುಸ್ಲಿಂ ರಾಷ್ಟ್ರದಲ್ಲಿ ಸಿಗುತ್ತೆ. ಹಾಗಾದ್ರೆ ಪೆಟ್ರೋಲ್ ಬೇಡ ಅಂತಾ ಎತ್ತಿನಗಾಡಿಯಲ್ಲಿ ಹೋಗ್ತೀರಾ ಎಂದು ವಾಗ್ದಾಳಿ ನಡೆಸಿದ್ದಾರೆ.
ದೇಹಕ್ಕಾದ ಗಾಯಗಳು ಸುಮ್ಮನಿದ್ರು ಕಡಿಮೆಯಾಗುತ್ತೆ.ಆದ್ರೆ ದೇಶಕ್ಕಾದ ಗಾಯ ನಾವು ಸುಮ್ಮನಿದ್ದಷ್ಟು ಹೆಚ್ಚಾಗುತ್ತದೆ.ನಮ್ಮ ದೇಶದಲ್ಲಿ ಎಂತ ನಾಯಕನಿದ್ದಾನೆ. ದೇಶವನ್ನು ಹೇಗೆ ಮಂಗ ಮಾಡ್ತಿದ್ದಾನೆ ಎಂದು ಪರೋಕ್ಷವಾಗಿ ಮೋದಿಯನ್ನು ಪ್ರಕಾಶ್ ರೈ ವ್ಯಂಗ್ಯವಾಡಿದ್ದಾರೆ.
2019 ರಲ್ಲಿ ಗುಹೆ ಸೇರಿಕೊಂಡ ಈಗ ಕ್ಯಾಮರಾ ಹಿಡಿದುಕೊಂಡು ನೀರೊಳಗೆ ಸೇರಿದ್ದಾನೆ. ಮುಂದಿನ ಚುನಾವಣೆಗೆ ಚಂದ್ರನ ಮೇಲೆ ನಿಂತುಕೊಳ್ಳುತ್ತಾನೆ. ದಿನಕ್ಕೆ ಐದು ಕಾಸ್ಟ್ಯೂಮ್ ಚೇಂಜ್ ಮಾಡ್ತಾನೆ. ಕರ್ಕಶವಾದ ಲೌಡ್ ಸ್ಪೀಕರ್ ಅವನು,ಈತ ವಂದೇ ಭಾರತ್ ಗೆ ಬಾವುಟ ತೋರಿಸಿದಷ್ಟು ಸ್ಟೇಷನ್ ಮಾಸ್ಟರ್ ಸಹ ಬಾವುಟ ತೋರಿಸಿರಲಿಕ್ಕಿಲ್ಲ ಎಂದು ಮೋದಿಯನ್ನು ತರಾಟೆಗೆ ತೆಗೆದುಕೊಂಡರು.ಹಿಂದೂ ರಾಷ್ಟ್ರ ಆದ ಮೇಲೆ ಮತ್ತೆ ಜಾತಿ ಪದ್ದತಿ ಶುರು ಮಾಡುತ್ತಾರೆ. ಫೇಕ್ ಡಿಗ್ರಿಯಲ್ಲಿ ಒಡಾಡುತ್ತಿರುವವನಿಗೆ ಇದೆಲ್ಲಾ ಹೇಗೆ ಗೊತ್ತಾಗುತ್ತೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಪಾರ್ಲಿಮೆಂಟ್ ಮೇಲೆ ನಾಲ್ಕೈದು ಯುವಕ ಯುವತಿಯರು ದಾಳಿ ಯಾಕೆ ಮಾಡಿದ್ರು ಎಂದು ನಾವು ಯೋಚನೆ ಮಾಡಬೇಕು.ನಿರುದ್ಯೋಗ ಸಮಸ್ಯೆ ಇದೆ ಎಂದು ಯುವಕರು ಹೇಳ್ತಿದ್ದಾರೆ.ಬಾಲ್ಯದಲ್ಲಿದ್ದಾಗ ಮಂಗಳೂರು ಹೀಗಾಗುತ್ತೆ ಎಂದು ಕೊಂಡಿರಲಿಲ್ಲ.ಎಷ್ಟು ಜನ ಯುವಕರು ಜೈಲಿನಲ್ಲಿ ಕೊಳಿತಾ ಇದ್ದಾರೆ. ಗಲಾಟೆ ಮಾಡಿಸುವ ಒಬ್ಬ ಜನಪ್ರತಿನಿಧಿಯ ಮಕ್ಕಳು ಜೈಲಿನಲ್ಲಿ ಇದ್ದಾರಾ..?ಎಂದು ಪ್ರಶ್ನಿಸಿದರು.
ದೇಶದಲ್ಲಿ ದೇವಸ್ಥಾನವನ್ನು ಉದ್ಘಾಟನೆ ಮಾಡುವ ಕೆಲಸ ಯಾರಾದರೂ ಮಾಡಿದ್ದಾರಾ. ಕಾಮಗಾರಿ ಅಪೂರ್ಣವಾಗಿ ಉದ್ಘಾಟನೆಯಾಗಿದೆ. ಸಂಗ್ರಹಿಸಿದ ದುಡ್ಡೆಲ್ಲಾ ಎಲ್ಲೋಯ್ತು..?ಕೋಟ್ಯಾಂತರ ಇಟ್ಟಿಗೆ ಎಲ್ಲೋಯ್ತು..?ಪ್ರಜಾಪ್ರಭುತ್ವ ಅಂದ್ರೆ ಮೆಜಾರಿಟಿ ಅಲ್ಲ ಮೆಜಾರಿಟಿ ಮುಖ್ಯವಾದ್ರೆ ಕಾಗೆ ರಾಷ್ಟ್ರೀಯ ಪಕ್ಷಿ ಆಗಬೇಕಿತ್ತು.ಹಸು ರಾಷ್ಟ್ರೀಯ ಪ್ರಾಣಿ ಆಗಬೇಕಿತ್ತು.ಪ್ರಜಾಪ್ರಭುತ್ವದಲ್ಲಿ ಅಧಿಕಾರ ಕೊಟ್ಟವರಲ್ಲಿ ಅಧಿಕಾರದ ಶಕ್ತಿ ಇದೆ. ಲೋಕಸಭಾ ಚುನಾವಣೆಯಲ್ಲಿ ಮನೆಮನೆಗೆ ಈ ಸಂದೇಶ ನೀಡಬೇಕು.ಮೋದಿ ಏನು ಕಿಸಿದು ಗುಡ್ಡ ಹಾಕಿದ್ದಾನೆ..?ಪ್ರಜಾಪ್ರಭುತ್ವದಲ್ಲಿ ಸೂಕ್ಷ್ಮತೆ ಇರಬೇಕು ಎಂದು ಮೋದಿ ವಿರುದ್ದ ರೈ ಕಿಡಿಕಾರಿದ್ದಾರೆ.