ಮಂಗಳೂರು, ಫೆ 26(DaijiworldNews/AK):ಜಲಜೀವನ್ ಮಿಷನ್ ಯೋಜನೆ ಯ ಒಂದು ಪ್ರಮುಖ ಕಾರ್ಯಕ್ರಮ ವಾದ ಆಟೋ ಪ್ರಚಾರಕ್ಕೆ ಚಾಲನೆ ನೀಡಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಆನಂದ್ ಕೆ , ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ಕಾರ್ಯ ಪಾಲಕ ಇಂಜಿನಿಯರ್ ಎನ್. ಡಿ. ರಘುನಾಥ್ ರವರು ಚಾಲನೆ ನೀಡಿದರು.
ಗ್ರಾಮೀಣಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ, ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಿಲ್ಲಾ ಪಂಚಾಯತ್, ದಕ್ಷಿಣ ಕನ್ನಡ ಹಾಗೂ ಯೋಜನಾ ಬೆಂಬಲ ಸಂಪನ್ಮೂಲ ಸಂಸ್ಥೆ, ಗ್ರಾಮ್ಸ್ -ರಾಯಚೂರು ಇವರ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ನೀರಿನ ಸದ್ಬಳಕೆ ಬಗ್ಗೆ, ಮಳೆ ನೀರಿನ ಕೊಯ್ಲಿನ ಬಗ್ಗೆ, ಬೂದು ನೀರಿನ ನಿರ್ವಹಣೆ ಬಗ್ಗೆ ಮಾಹಿತಿ ಯನ್ನು ಸಾರುವ ಈ ವಾಹನವು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ಸಂಚರಿಸಿ ಜನರಿಗೆ ಮಾಹಿತಿ ಯನ್ನು ನೀಡಲಿದೆ.
ಈ ಕಾರ್ಯಕ್ರಮದಲ್ಲಿ ಜಲಜೀವನ್ ಮಿಷನ್ ನ ದಕ್ಷಿಣ ಕನ್ನಡ ಜಿಲ್ಲಾ ಯೋಜನಾ ವ್ಯವಸ್ಥಾಪಕರಾಗಿರುವ ಶ್ರೀ ವಿಘ್ನಶ್ ರಾಜ್, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ಕುಡಿಯುವ ನೀರಿನ ಪರೀಕ್ಷಾ ಪ್ರಯೋಗಾಲಯ ದ ಹಿರಿಯ ವಿಶ್ಲೇಷಕ ವಿಜಯ ಲಕ್ಷೀ ಹಾಗೂ ಸಿಬ್ಬಂದಿ ರವರು, ಸ್ವಚ್ಛ ಭಾರತ್ ಮಿಷನ್ ನ ನವೀನ್ ರವರು ಹಾಗೂ ದೊಂಬಯ್ಯ ಜಲಜೀವನ್ ಮಿಷನ್ ನ ಯೋಜನಾ ಬೆಂಬಲ ಸಂಸ್ಥೆಯ ಟೀಮ್ ಲೀಡರ್ ಆಗಿರುವ ಲಲಿತಾ ಮತ್ತು ಗ್ರಾಮೀಣ ಕುಡಿಯುವ ನೀರಿನ ಇಲಾಖೆ ಯ ಸಿಬ್ಬಂದಿ ಈ ಕಾರ್ಯಕ್ರಮ ದಲ್ಲಿ ಭಾಗವಹಿಸಿದರು.