Karavali
ಮಂಗಳೂರು: ನವೀಕರಣಗೊಂಡು ನವರೂಪ ಪಡೆದ ಮಾನಸ ಅಮ್ಯೂಸ್ಮೆಂಟ್ ಮತ್ತು ವಾಟರ್ ಪಾರ್ಕ್
- Mon, Feb 26 2024 04:03:35 PM
-
ಮಂಗಳೂರು, ಫೆ 26 (DaijiworldNews/MS): ಮಾನಸ ಅಮ್ಯೂಸ್ ಮೆಂಟ್ ಮತ್ತು ವಾಟರ್ ಪಾರ್ಕ್ 2002 ಇಸವಿಯಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಬಂದಿತಾದರು,ಆರಂಭದಲ್ಲಿ ಇದ್ದಂತಹ ಸವಲತ್ತುಗಳೊಂದಿಗೆ ಹಾಗೆಯೇ ಮುಂದುವರೆಯಿತು.
2019 ಡಿಸೆಂಬರ್ ತಿಂಗಳಲ್ಲಿ ಇಡೀ ವಿಶ್ವಕ್ಕೆ ಕೋವಿಡ್ ಎಂಬಂತಹ ಮಾರಣಾಂತಿಕ ವೈರಸ್ ಬಂದು ಎಲ್ಲಾ ಉದ್ದಿಮೆಗಳಿಗೆ ಅದರ ಪ್ರಭಾವ ತಟ್ಟಿತು. ಅತಿ ಹೆಚ್ಚು ಸಂಕಷ್ಟಕ್ಕೆ ಬಲಿಯಾದ ಕ್ಷೇತ್ರ ಎಂದರೆ ಪ್ರವಾಸೋದ್ಯಮ. ನಮ್ಮೀ ಮಾನಸ ಸಂಸ್ಥೆಯನ್ನು ಸರಕಾರದ ಆದೇಶದ ಪ್ರಕಾರ 22.03.2020 ರಂದು ಪ್ರವಾಸಿಗರ ಉಪಯೋಗಕ್ಕೆ ಮುಚ್ಚಲ್ಪಟ್ಟಿತು. ಆ ಸಮಯದ ಮ್ಯಾನೇಜ್ ಮೆಂಟ್ ಈ ಸಂಸ್ಥೆಯನ್ನು ಮುನ್ನಡೆಸಲು ಹಿಂದೇಟು ಹಾಕಿದ್ದರಿಂದ ಪ್ರಸ್ತುತ ಈ ಸಂಸ್ಥೆಯ ಅಧ್ಯಕ್ಷರು (chairman) ಶ್ರೀಯುತ ಯೂಜಿನ್ ವಿಲ್ಫ್ರೆಡ್ ಪಿಂಟೋ, ಕಾರ್ಯನಿರ್ವಾಹಕ ನಿರ್ದೇಶಕರಾದಂತಹ ಶ್ರೀಯುತ ಜಯೇಶ್ ಸೆಬಾಸ್ಟಿಯನ್ ಹಾಗೂ ಶ್ರೀಯುತ ಸುನಿಲ್ ರಾಜ್ ಗೋಪಾಲ್ ಜೊತೆಯಾಗಿ ಈ ಸಂಸ್ಥೆಯನ್ನು ನಡೆಸಲು ಕ್ಲಷ್ಟಕರ ಪರಿಸ್ಥಿತಿಯಲ್ಲಿಯೂ ಮುಂದೆ ಬಂದರು. ತುಕ್ಕು ಹಿಡಿದ ಮಷೀನರಿಗಳನ್ನು ,ಗಾರ್ಡನ್ ನ್ನು ,ಸ್ಲೈಡ್ ಗಳನ್ನು ಸರಿಪಡಿಸಲು ಹಾಗೂ ಪಾರ್ಕ್ ಸಹಜ ಸ್ಥಿತಿಗೆ ತರಲು ಯೋಚಿಸಿದ ಬಜೆಟ್ ಗಿಂತ ಹತ್ತು ಪಾಲು ಹೆಚ್ಚು ಹಣವನ್ನು ಖರ್ಚು ಬಂದರೂ ಯಾವುದನ್ನೇ ಲೆಕ್ಕಿಸದೆ ದುರಸ್ತಿ ಕಾರ್ಯ ಮಾಡಿಸಿ ಇಂದಿಗೆ ಎರಡು ವರ್ಷಗಳು ಸಂದವು. ಆದರೂ ಪ್ರಥಮ ವರ್ಷದಲ್ಲಿ ದುರಸ್ತಿ ಕಾರ್ಯ ಹಾಗೂ ಎಲ್ಲಾ ವಿಭಾಗಗಳಲ್ಲಿ ಉದ್ಯೋಗಿಗಳನ್ನು ನೇಮಕಾತಿ ಮಾಡಿ ಸಿಬ್ಬಂದಿ ವರ್ಗಕ್ಕೂ ಸೂಕ್ತ ಹಾಗೂ ಎಲ್ಲಾ ಸವಲತ್ತುಗಳನ್ನು ನೀಡಿ, ರೈನ್ ಡ್ಯಾನ್ಸ್ ಜೊತೆಗೆ ಮಕ್ಕಳಿಗಾಗಿ ಅಮ್ಮ್ಯೂಸ್ ಮೆಂಟ್ ಗೇಮ್ಸ್ ಗಳನ್ನು ಅಳವಡಿಸಲಾಯಿತು.
ಮೊದಲನೇ ವಾರ್ಷಿಕ ದಿನದಂದು ಭರವಸೆ ಕೊಟ್ಟ ಹಾಗೆ ಈ ಎರಡನೇ ವರ್ಷದಲ್ಲಿ ಎಲ್ಲಾ ಕಟ್ಟಡಗಳ ದುರಸ್ತಿ ಕಾರ್ಯ ಹಾಗೂ ಪೈಂಟಿಂಗ್ ನ್ನು ಮಾಡಿಸಿ ಕರ್ನಾಟಕದ ಅತಿ ದೊಡ್ಡ ವೇವ್ ಫೂಲ್ ನ್ನು 4 ಕೋಟಿ 50 ಲಕ್ಷ ಖರ್ಚಿನಲ್ಲಿ ತಯಾರಿಸಿ ಪ್ರವಾಸಿಗರ ಉಪಯೋಗಕ್ಕೆ ಬಿಟ್ಟುಕೊಟ್ಟೆವು. ಜೊತೆಗೆ 12 ವರ್ಷ ಒಳಗಿನ ಮಕ್ಕಳಿಗೋಸ್ಕರ ಟೋಡ್ಲರ್ ಪೂಲ್ ನ್ನು 1.5 ಕೋಟಿ ಖರ್ಚಿನಲ್ಲಿ ತಯಾರು ಮಾಡಿ ಇವತ್ತು ಅಧಿಕೃತವಾಗಿ ನಮ್ಮ ನಿರ್ದೇಶಕರಾದಂತಹ ಶ್ರೀಯುತ ಬಂಗಾರು ಹನುಮಂತಪ್ಪ ರವರ ಹೆತ್ತವರಿಂದ ಉದ್ಘಾಟನೆಗೈದು ಸಾರ್ವಜನಿಕರ ಉಪಯೋಗಕ್ಕೆ ಬಿಟ್ಟು ಕೊಟ್ಟಿದ್ದೇವೆ.
ಕರಾವಳಿಯ ವಿವಿಧ ಜಾತಿ ಧರ್ಮದವರ ಖಾಸಗಿ ಕಾರ್ಯಕ್ರಮಗಳಿಗೆ, ಕಾರ್ಪೊರೇಟ್ ಕಂಪನಿಗಳಿಗೆ, ಸಂಘ ಸಂಸ್ಥೆಗಳ ವಿವಿಧ ಕಾರ್ಯಕ್ರಮಗಳಿಗೆ, ಆಕರ್ಷಣೀಯ ತಾಣವನ್ನು ನಿರ್ಮಿಸಿದ್ದೇವೆ. ಹಾಗೂ ಇಷ್ಟರಲ್ಲಿಯೇ ಈ ತಾಣಗಳಲ್ಲಿ ವಿವಿಧ ಕಾರ್ಯಕ್ರಮಗಳು, (ಮದುವೆ, ರೋಸ್, ಮೆಹಂದಿ,) ನಡೆದಿವೆ. ಇಂತಹ ಕಾರ್ಯಕ್ರಮಗಳು ನಡೆಯುವ ಸಂದರ್ಭದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವವರ ಹಾಗೂ ಆಮಂತ್ರಿತರ ಕನಿಷ್ಠ 600 ವಾಹನಗಳ ಪಾರ್ಕಿಂಗ್ ನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ. ಮುಂದೆಯೂ ಇಂತಹ ಕಾರ್ಯಕ್ರಮಗಳನ್ನು ನಡೆಸಲು ಇಷ್ಟರಲ್ಲಿಯೇ ಬುಕ್ಕಿಂಗ್ ಆರಂಭಗೊಂಡಿದೆ.
ಅಂದಾಜು 3 ಕೋಟಿ ಖರ್ಚಿನಲ್ಲಿ ಇನ್ನೂ ಹೆಚ್ಚಿಗೆ 17 ಕಾಟೇಜ್ ಗಳು, 250 ರಿಂದ 300 ಜನರು ಬಳಸುವ ಕಾನ್ಫರೆನ್ಸ್ ರೂಂ, ವಿವ್ ಟವರ್,ವಿಂಡ್ ಮಿಲ್ ಹಾಗೂ ಲಿಫ್ಟ್ ಸೌಕರ್ಯ ದೊಂದಿಗೆ ಪ್ರವಾಸಿಗರ ಅಂದರೆ ಜಾಸ್ತಿಯಾಗಿ ಶಾಲಾ ಮಕ್ಕಳ ಬ್ಯಾಗೆಜನ್ನು ಇಡಲು ಕೊಠಡಿಗಳ ವ್ಯವಸ್ಥೆ ನಿರ್ಮಾಣ ಕಾರ್ಯ ವಿವಿಧ ಹಂತದಲ್ಲಿವೆ. ಇದರ ಕೆಲಸವೂ ಇದೇ ಮಾರ್ಚ್ 31ರ ಒಳಗಡೆ ಮುಗಿಯಲಿದೆ.
ಹಲವು ವರ್ಷಗಳಿಂದ ಬಾಕಿ ಉಳಿದಿರುವ ಕ್ರೇಜಿ ರಿವರ್ ಕೊಳವನ್ನು ಏಪ್ರಿಲ್ 30ರ ಒಳಗಡೆ ಸಾರ್ವಜನಿಕರ ಉಪಯೋಗಕ್ಕೆ ಬಿಡುಗಡೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ.
800 ರಿಂದ 1000 ಜನ ಕುಳಿತುಕೊಳ್ಳಲು ಹಾಗೂ ಕಾರ್ಯಕ್ರಮ ವೀಕ್ಷಿಸಲು ಆಗುವಂತಹ ಆಂಫಿ ಥಿಯೇಟರ್ ಕಾಮಗಾರಿ ಆರಂಭಗೊಂಡಿದೆ.
ಅಂದಾಜು 100 ಕೋಟಿ ಖರ್ಚಿನಲ್ಲಿ ಏಷ್ಯಾ ಖಂಡದ ಅತಿ ದೊಡ್ಡದಾದ ಅಕ್ವೇರಿಯಂ ಕಾಮಗಾರಿಯನ್ನು "ಮಾನಸ ಮರೈನ್ ವರ್ಲ್ಡ್” ಹೆಸರಲ್ಲಿ ಆರಂಭಿಸಲಾಗಿದೆ. ಮುಂದಿನ ವರ್ಷದ ಒಳಗಡೆ ಇದನ್ನು ಸಾರ್ವಜನಿಕರ ಉಪಯೋಗಕ್ಕಾಗಿ ಬಿಡುಗಡೆಗೊಳಿಸಲು ಪ್ರಯತ್ನಿಸಲಾಗುತ್ತಿದೆ.
ಇಷ್ಟರಲ್ಲಿಯೇ Zipline, Zip cycling, 360° cycling, Gyro, ಈ ಅಡ್ವೆಂಚರಸ್ ಕ್ರೀಡೆಗಳನ್ನು ಪ್ರವಾಸಿಗರಿಗೆ ಕನಿಷ್ಠ ದರದಲ್ಲಿ ಒದಗಿಸಲಾಗುತ್ತಿದೆ. ಈ ಎಲ್ಲಾ ಕಾಮಗಾರಿಗಳು ನಿರ್ದೇಶಕರ ಆರ್ಥಿಕ ಸಹಕಾರದೊಂದಿಗೆ ಈ ಎರಡನೇ ವರ್ಷದಲ್ಲಿ ಆರಂಭಿಸಲು ಹಾಗೂ ಈ ಮಾನಸ ಸಂಸ್ಥೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೂ ಕೊಂಡೊಯ್ಯುವ ಪ್ರಯತ್ನದಲ್ಲಿ ಇಷ್ಟರಲ್ಲಿಯೇ ಯಶಸ್ಸು ಕಂಡಿದ್ದೇವೆ.
ನಮ್ಮ ಈ ಸಂಸ್ಥೆಯು ಆಲ್ ಇಂಡಿಯಾ ಅಮ್ಯೂಸ್ ಮೆಂಟ್ ಅಸೋಸಿಯೇಷನ್ ಮುಂಬೈ, ಕೆನರಾ ಚೇಂಬರ್ ಆಫ್ ಕಾಮರ್ಸ್ ಮಂಗಳೂರು ಇದರ ಸದಸ್ಯತ್ವವನ್ನು ಹೊಂದಿದೆ.
ನಮ್ಮ ಸಂಸ್ಥೆಗೆ ದಿನಾಂಕ 13.12.2023 ರಂದು ISO 14001: 2015 ಪ್ರಮಾಣ ಪತ್ರ ಸಿಕ್ಕಿದ್ದು. ಯಾವುದೇ ಸಂಸ್ಥೆಗಿಂತ ನಾವು ಹಿಂದಿಲ್ಲವೆಂದು ಸಾಧಿಸಿ ತೋರಿಸಿದ್ದೇವೆ.ಮಾನಸ ಸಂಸ್ಥೆಯಲ್ಲಿ ಪ್ರಸ್ತುತ 75 ಉದ್ಯೋಗಿಗಳಿದ್ದು ಅವರೆಲ್ಲರ ಸಹಕಾರದೊಂದಿಗೆ ನಮ್ಮ ಸಂಸ್ಥೆ ಮುನ್ನಡೆಸಲು ನಮಗೆ ಸಾಧ್ಯವಾಗಿದೆ.ನಮ್ಮ ಉದ್ಯೋಗಿಗಳಿಗೆ ಸರಕಾರ ನಿಗದಿ ಪಡಿಸಿದ ಎಲ್ಲಾ ಸವಲತ್ತುಗಳನ್ನು ನೀಡುತ್ತಾ ಬಂದಿದ್ದೇವೆ. ಅವರಿಗೋಸ್ಕರ ವಿವಿಧ ವಿಷಯಗಳ ಗೋಷ್ಠಿ ಏರ್ಪಡಿಸಿದ್ದೇವೆ ಹಾಗೂ ಸ್ಪರ್ಧಾತ್ಮಕ ಚಟುವಟಿಕೆಗಳನ್ನು ನಡೆಸಿದ್ದೇವೆ. ನಮ್ಮ ಉದ್ಯೋಗಿಗಳ ಶಿಸ್ತಿನ ಬಗ್ಗೆ ಸದಾ ಗಮನ ಹರಿಸಿದ್ದೇವೆ.
ನಮ್ಮೀ ರೆಸ್ಟೋರೆಂಟ್ ಮುಖಂಡತ್ವವನ್ನು ವಹಿಸಿ ಪ್ರವಾಸಿಗರಿಗೆ ಹಾಗೂ ನಮ್ಮ ಉದ್ಯೋಗಿಗಳಿಗೆ ಒಳ್ಳೆಯ ಉಪಹಾರ, ಊಟ ಒದಗಿಸಿ ಕೊಡುವ ಶ್ರೀಯುತ ಸಜೇಶ್, ಶ್ರೀಯುತ ನೂತನ್, ಶ್ರೀಮಾನ್ ಪ್ರಜ್ವಲ್ ಹಾಗೂ ಎಲ್ಲಾ ಸಿಬ್ಬಂದಿಯವರ ಪರಿಶ್ರಮ ಇವತ್ತು ನಾವು ನೆನೆಸಬೇಕಾಗಿದೆ.
ಪ್ರಸ್ತುತ ಪಿಲಿಕುಳ ನಿಸರ್ಗಧಾಮ ಪ್ರಾಧಿಕಾರ ಕಮಿಷನರ್ ಶ್ರೀಯುತ ಪ್ರವೀಣ್ ನಾಯ್ಕ್. ನಮ್ಮೀ ಸಂಸ್ಥೆಯ ಸೆಕ್ರೆಟರಿಯವರಾದ ಶ್ರೀಯುತ ಚೇತನ್ ನಾಯ್ಕ್ , ಚಾರ್ಟೆಡ್ ಅಕೌಂಟೆಂಟ್ ಆಗಿ ಇತ್ತೀಚಿಗಷ್ಟೇ ಜವಾಬ್ದಾರಿಯನ್ನು ವಹಿಸಿದ ಹಾಗೂ ಎಲ್ಲಾ ರೀತಿಯಲ್ಲೂ ಸಹಕಾರ ನೀಡುವ ಶ್ರೀಯುತ ಡೈಲಾನ್ ರೆಬೆಲ್ಲೋ, ಹಾಗೂ ವರುಷದ 365 ದಿನಗಳಲ್ಲೂ ಸಮಯದಲ್ಲೂ ಪ್ರವಾಸಿಗರು ಇರುವಾಗ ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕರಿಸುತ್ತಿರುವ ಕಾವೂರು ಆರಕ್ಷಕ ಠಾಣಾಧಿಕಾರಿ ಹಾಗೂ ಸಿಬ್ಬಂದಿಗಳ ಸೇವೆಯನ್ನು ನಾನು ನಿರ್ದೇಶಕರ ಮಂಡಳಿಯ ಪರವಾಗಿ ಸ್ಮರಿಸುತ್ತೇನೆ.
ಸಂಸ್ಥೆಯ ಪ್ರಚಾರ (ಪಬ್ಲಿಸಿಟಿ) ಕಾರ್ಯಕ್ಕೆ ಸಹಕರಿಸುತ್ತಿರುವ ಎಲ್ಲಾ ಮಾಧ್ಯಮಗಳಿಗೆ ಹಾಗೂ ನಮ್ಮ ಶೇರು ದಾರರ ಸಹಕಾರವನ್ನೂ ಸ್ಮರಿಸುತ್ತೇನೆ.