ಬೈಂದೂರು, ಫೆ 26 (DaijiworldNews/MS): ಬೈಂದೂರು ತಾಲೂಕಿನ ಶಿರೂರು ಗ್ರಾಮದಲ್ಲಿ ದಲಿತರಿಗೆ ಮೀಸಲಿಟ್ಟ ಡಿಸಿ ಮನ್ನಾ ಭೂಮಿ ದಲಿತರಿಗೆ ಹಂಚದೆ ದಲಿತರಿಗೆ ಅನ್ಯಾಯ ಮಾಡಲಾಗಿದೆ ಎಂದು ದಲಿತ ಸಂಘಟನೆ ಕಾರ್ಯಕರ್ತರು ಬೈಂದೂರು ತಾಲೂಕು ಕಚೇರಿ ಮುಂಭಾಗ ಸೋಮವಾರ ಅನಿರ್ದಿಷ್ವಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ಬಂದು 76 ವರ್ಷಗಳೇ ಕಳೆದರೂ ಬೈಂದೂರಿನ ಶಿರೂರಿನಲ್ಲಿ ಡಿಸಿ ಮಬ್ನಾ ಭೂಮಿ ಹಂಚದ ಉಡುಪಿ ಜಿಲ್ಲಾಡಳಿತ ದಲಿತರು ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ಸಾಮಾಜಕವಾಗಿ ಹಿಂದುಳಿಯುವಂತೆ ಮಾಡಿ ದಲಿತರ ಸಾಂವಿಧಾನಿಕ ಹಕ್ಕುಗಳ ಕಗ್ಗೋಲೆ ಮಾಡಿ, ದಲಿತ ವಿರೋಧಿ ನಡವಳಿಕೆ ತೋರಿದ್ದಾರೆ. ಇದನ್ನು ಖಂಡಿಸಿ ಮುಖ್ಯಮಂತ್ರಿಗಳು ಪ್ರತಿಭಟನಾ ಸ್ಥಳಕ್ಕೆ ಬಂದು ನಮ್ಮ ಬೇಡಿಕೆ ಈಡೇರಿಸುವ ಭರವಸೆ ನೀಡುವವರೆಗೂ ಬೈಂದೂರು ತಾಲೂಕು ಕಛೇರಿ ಮುಂಭಾಗ ಶಿರೂರು ದಲಿತ ಮುಖಂಡರಿಂದ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಮಂದುವರೆಯಲಿದೆ ಎಂದು ಸಂಘಟನೆ ತಿಳಿಸಿದೆ.
ದಲಿತ ಮುಖಂಡರಾದ ರಮೇಶ್ ಶಿರೂರು, ರಾಘವೇಂದ್ರ ಶಿರೂರು, ರಾಮ ಬೈಂದೂರು, ಮಹಾಲಕ್ಷ್ಮಿ ಬೈಂದೂರು ಸೇರಿದಂತೆ ದಲಿತ ನಾಯಕರು ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಾರೆ.