ಮಂಗಳೂರು, ಫೆ 24(DaijiworldNews/MS): ಕರ್ನಾಟಕ ಸಿವಿಲ್ ನ್ಯಾಯಾಧೀಶರ 2023ನೆ ಸಾಲಿನ ಪರೀಕ್ಷೆಯಲ್ಲಿ ತುಮಕೂರು ಮೂಲದ ಗೀತಾ ಡಿ. ಉತ್ತೀರ್ಣರಾಗಿದ್ದು, ಸಿವಿಲ್ ನ್ಯಾಯಧೀಶರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆ ಮತ್ತು ಮಂಗಳೂರಿನ ಎಸ್ಡಿಎಂ ಕಾನೂನು ಕಾಲೇಜಿನಲ್ಲಿ ಶಿಕ್ಷಣ ಪಡೆದ ಇವರು 2023ರ ಕರ್ನಾಟಕ ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ ಮೂಲಕ ಕರಾವಳಿಗೆ ಕೀರ್ತಿ ತಂದಿದ್ದಾರೆ.
ಮಂಗಳೂರಿನ ಹೆಸರಾಂತ ವಕೀಲರಾದ ಮಯೂರ ಕೀರ್ತಿ ಹಾಗೂ ಶ್ರೀ ಶರತ್ ಕುಮಾರ್ ಬಿ. ರವರ ಕಛೇರಿಯಲ್ಲಿ ಕಿರಿಯ ವಕೀಲರಾಗಿ ವೃತ್ತಿ ಆರಂಭಿಸಿ ತಮ್ಮ ವೃತ್ತಿಯನ್ನು ಮುಂದುವರಿಸುತ್ತಾ ಬಂದಿರುತ್ತಾರೆ. ನಂತರ ಗೀತಾ ಡಿ. ರವರು ವಕೀಲರಾದ ಕಾರ್ತಿಕ್ ಮಚ್ಚಿಲರವನ್ನು ವಿವಾಹವಾಗಿದ್ದು ತಮ್ಮ ವೃತ್ತಿಯನ್ನು ಮುಂದುವರಿಸುತ್ತಾ ಬಂದಿರುತ್ತಾರೆ. ಶ್ರೀಮತಿ ಗೀತಾ ಡಿ. ರವರು ಡಿ. ಕೊಂಬೇಗೌಡ ಹಾಗೂ ಶ್ರೀಮತಿ ಕೋಮಲ ರವರ ಪುತ್ರಿಯಾಗಿರುತ್ತಾರೆ.
ಮೂಲತಃ ತುಮಕೂರಿನವರಾದ ಗೀತಾ ಪ್ರಸಕ್ತ ಕಡಬ ಸಮೀಪದ ಚಾರ್ವಾಕದಲ್ಲಿ ಪತಿಯೊಂದಿಗೆ ನೆಲೆಸಿದ್ದಾರೆ.