ಕಾಸರಗೋಡು, ಫೆ 24 (DaijiworldNews/HR): ಮುಂಬೈಯಲ್ಲಿ ನಡೆದ ಅಪಘಾತದಲ್ಲಿ ಕಯ್ಯಾರ್ ನಿವಾಸಿಯೋರ್ವರು ಮೃತಪಟ್ಟ ಘಟನೆ ನಡೆದಿದೆ.
ಕಯ್ಯಾರ್ ಚನ್ನಿಕುಡೇಲ್ ನ ದಿವಂಗತ ಮಾರ್ಸೆಲ್-ಲೀನಾ ಕ್ರಾಸ್ತ ದಂಪತಿ ಪುತ್ರ ರೂಬನ್ ಚಾರ್ಲ್ಸ್ ಕ್ರಾಸ್ತ (39) ಮೃತ ಪಟ್ಟವರು.
ಮುಂಬೈನಲ್ಲಿ ಉದ್ಯಮ ನಡೆಸುತ್ತಿದ್ದ ಅವರು, ಶುಕ್ರವಾರ ಸಂಜೆ ಮುಂಬೈ ಯಲ್ಲಿ ಬೈಕ್ ಮತ್ತು ಲಾರಿ ನಡುವೆ ಉಂಟಾದ ಅಪಘಾತದಲ್ಲಿ ಮೃತಪಟ್ಟಿದ್ದು, ಗಂಭೀರ ಗಾಯಗೊಂಡ ರೂಬನ್ ನನ್ನು ಸಮೀಪದ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಳಿಲ್ಲ. ರೂಬನ್ ಕಳೆದ 23 ವರ್ಷ ಗಳಿಂದ ಮುಂಬೈಯಲ್ಲಿ ಉದ್ಯಮ ನಡೆಸುತ್ತಿದ್ದರು.
ಇನ್ನು ರೂಬನ್ ಮೂರು ತಿಂಗಳ ಹಿಂದೆಯಷ್ಟೇ ಊರಿಗೆ ಬಂದು ಮರಳಿದ್ದರು. ಮೃತ ದೇಹವನ್ನು ಇಂದು ಮಂಗಳೂರಿಗೆ ತಲಪಿಸ ಲಾಗುವುದು. ಅಂತ್ಯ ಕ್ರಿಯೆನಾಳೆ (25) ಸಂಜೆ 4 ಗಂಟೆಗೆ ಕಯ್ಯಾರ್ ಕ್ರಿಸ್ತ ರಾಜ ದೇವಾಲಯದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಪತ್ನಿ ಪ್ರಜ್ಞಾ, ಪುತ್ರಿ ರೀವಾ, ಸಹೋದರ - ಸಹೋದರಿಯರು, ಶಾಲೆಟ್, ಜೀವನ್ , ಬ್ರಾಯಾನ್, ಪ್ರಮೀಳಾ, ರೋಷನ್, ಜಾನೆಟ್, ಶರ್ಮಿಳಾ ಅವರನ್ನು ಅಗಲಿದ್ದಾರೆ.